ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ಇದರ ಆಶ್ರಯದಲ್ಲಿ 1994 ರಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಪ್ರಾರಂಭಗೊಂಡಿತ್ತು. ಈ ವರ್ಷ 24 ವರ್ಷ ಪೂರೈಸಿದೆ. ಆ ಪ್ರಯುಕ್ತ ಅರ್ಧಮಂಡಲೋತ್ಸವ ಕಾರ್ಯಕ್ರಮವು ವಿಟ್ಲದ ಅನಂತ ಸದನದಲ್ಲಿ ನಡೆಸಲಾಯಿತು. ಬೆಳಿಗ್ಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಸಂಜೆ ಲೋಕ ಕಲ್ಯಾಣಾರ್ಥವಾಗಿ ಎರುಂಬು ಬಾಲಕೃಷ್ಣ ಕಾರಂತರ ನೇತೃತ್ವದಲ್ಲಿ `ದುರ್ಗಾ ಪೂಜೆ ನಮಸ್ಕಾರ ಪೂಜೆ’ ನಡೆಯಿತು.

ಕಾರ್ಯಕ್ರಮದಲ್ಲಿ ಪಾರ್ವತಿ ರಾಮಮೋಹನ ವಿಟ್ಲ ಇವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯೆ ವಿದ್ಯಾಶ್ರೀ ಎಸ್ ಧಾರ್ಮಿಕ ಪ್ರವಚನ ನೀಡಿದರು.
ಬಂಟ್ವಾಳ ತಾಲೂಕು ಮಹಿಳ ಮಂಡಳಿ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿದೇವಿ, ಅರ್ಧಮಂಡಲೋತ್ಸವ ಸಮಿತಿ ಅಧ್ಯಕ್ಷೆ ಮೂಕಾಂಬಿಕಾ ಉಪಸ್ಥಿತರಿದ್ದರು. ಧರ್ಮಾವತಿ ಪಿ ಬಿ ಸ್ವಾಗತಿಸಿದರು. ಕಾರ್ಯದರ್ಶಿ ರಶ್ಮಿ ಹರೀಶ್ ವಿಟ್ಲ ನಿರೂಪಿಸಿದರು. ಕೋಶಾಧಿಕಾರಿ ರೇವತಿ ವಂದಿಸಿದರು.

