ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದಜರ್ೆ ಮಹಾವಿದ್ಯಾಲಯದಲ್ಲಿ ನಡೆದ 2014ರ ಜನಾದೇಶ ಒಂದು ವಿಶ್ಲೇಷಣೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಅಂಕಣಕಾರ ಪ್ರತಾಪಸಿಂಹ ಉದ್ಘಾಟಿಸಿದರು. ಭಾರತದ ನೂತನ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರ ಚಿಂತನೆ ಹಾಗೂ ಕಾರ್ಯದ ಜೊತೆಗೆ ಎಲ್ಲರೂ ಸಾಗಲು ಸಿದ್ಧರಾಗಬೇಕೆಂದು ಅವರು ಹೇಳಿದರು. ಮೋದಿ ಎನ್ನುವಂತಹ ಅಲೆ ದೇಶದ ಎಲ್ಲಾ ವರ್ಗದ ಜನರನ್ನು ಆಕಷರ್ಿತರಾಗುವಂತೆ ಮಾಡಿತು. ಈ ದೇಶಕ್ಕೆ ನವ ಭವಿಷ್ಯ ಬರಲು ಮೋದಿಯವರಿಂದ ಮಾತ್ರ ಸಾಧ್ಯ ಎಂದರು.

prathap simha (4)

prathap simha

prathap simha (1)

prathap simha (2)

prathap simha (3)
ಮೋದಿಯವರಿಗೆ ಬಾಯಿಂದ ಬಾಯಿಗೆ ಬಂದ ಪ್ರಚಾರದಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿತು. ಸ್ವತಂತ್ರ ಭಾರತದಲ್ಲಿ ಗಾಂಧಿಜಿಯ ನಂತರ ಮನೆ ಮಾತಾದ ಮೊದಲನೆಯ ವ್ಯಕ್ತಿ ನರೇಂದ್ರ ಮೋದಿ. ಇವರು ಪ್ರಧಾನಿ ಆಗುವ ಮೊದಲೇ ದೇಶದ ಬಗ್ಗೆ ಸುದೀರ್ಘವಾದ ಆಲೋಚನೆಯನ್ನು ಮಾಡಿದ್ದರು. ಮೋದಿಯವರ ಅದ್ಭುತವಾದ ಭಾಷಣದಿಂದ ಮತ್ತು ಎದೆಗಾರಿಕೆಯಿಂದ ಎಲ್ಲಾ ವರ್ಗದ ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು.
ಭಾರತದಲ್ಲಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಮಾಜಿಕ ತಂತ್ರಗಾರಿಕೆಯನ್ನು ಬಹಳ ತೀಕ್ಷ್ಣವಾಗಿ ಬಳಸಿದವರು ಪ್ರಧಾನ ಮಂತ್ರಿ ಮೋದಿಯವರಾಗಿದ್ದಾರೆ. ಪ್ರಸ್ತುತ ಬಿಜೆಪಿ ಸರಕಾರದಲ್ಲಿ 62 ಜನ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೋದಿಯವರನ್ನು ಮನೆ ಮಾತಾಗಿಸಲು ಪ್ರತಿಯೊಂದು ಸಂಘ ಪರಿವಾರದವರು ಶ್ರಮಿಸಿದ್ದಾರೆ. ತಮ್ಮ ಜನಾದೇಶದ ಕೊನೆಯಲ್ಲಿ ಎಲ್ಲಾ ಯುವಸಮುದಾಯಕ್ಕೆ ಒಂದು ಕಿವಿ ಮಾತು ಹೇಳಿದರು. ಪ್ರಧಾನ ಮಂತ್ರಿಗಳ 3ದಿನದ ಸರಕಾರದ ಸಾಧನೆಯನ್ನು ನೋಡಿದ್ದೀರಿ ಎಲ್ಲವೂ ಒಮ್ಮೆಲೇ ಆಗಬೇಕೆಂದರೆ ಅವರಲ್ಲಿ ಮಾಂತ್ರಿಕ ದಂಡವಿಲ್ಲ ಅದರ ಬದಲು ಈ ದೇಶಕ್ಕಾಗಿ ನಾವೇನು ಕೊಡುತ್ತೇವೆ ಎನ್ನುವುದರ ಮುಖ್ಯ ಎಲ್ಲರೂ ಸಕಾರಾತ್ಮಕ ಯೋಚಿಸಿದರೆ ಜನಾದೇಶಕ್ಕೆ ಒಂದು ಅರ್ಥ ಬರುತ್ತದೆ.
ನಂತರ ನಡೆದ ವಾದಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇನ್ನು ಮುಂದೆ ಮೋದಿಯವರ ಜಪಾನ್ ಭೇಟಿಯಿಂದ ವಿದ್ಯಾಥರ್ಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚು ಸೃಷ್ಟಿಯಾಗುತ್ತದೆ. ನಾವೆಲ್ಲರೂ ಈ ದೇಶದಜಲ,ಮಣ್ಣು, ಸಂಸ್ಕೃತಿಯನ್ನು ಪ್ರೀತಿಸುವವರಾಗ ಬೇಕೆಂದು ಹೇಳಿದರು.
ಸಂಸ್ಥೆಯ ಸಂಚಾಲಕ ಡಾ ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ನಾವು ಬದುಕಲು ಚೈತನ್ಯವನ್ನು ನೀಡುವಂತಹ ರಾಷ್ಟ್ರದ ಹಿನ್ನೆಲೆಯಲ್ಲಿ ಜನಾದೇಶ ಎಂಬ ವಿಚಾರದ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದೇವೆ ಎಂದರು. ಒಟ್ಟು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 38 ಕಾಲೇಜುಗಳಿಂದ ಉಪನ್ಯಾಸಕರೂ, ವಿದ್ಯಾಥರ್ಿಗಳೂ ಹಾಗೂ ಇತರ ಪ್ರತಿನಿಧಿಗಳು ಸೇರಿ ಒಟ್ಟು 500ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ನಾರಾಯಣ ಸೋಮಯಾಜಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಯತಿರಾಜ್ ವಂದಿಸಿದರು. ಉಪನ್ಯಾಸಕರಾದ ಮಹೇಶ್ ಮತ್ತು ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *