ಸುದ್ದಿ9ಬಂಟ್ವಾಳ: ಪೌಷ್ಟಿಕಯುಕ್ತ ಆಹಾರವನ್ನು ಸೇವಿಸಿ ಆರೋಗ್ಯವನ್ನು ಹೊಂದಿದರೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಪುರಸಭಾ ಸದಸ್ಯ ಸದಾಶಿವ ಬಂಗೇರ ಹೇಳಿದರು.
ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸ್ತ್ರೀ ಶಕ್ತಿ ಗೊಂಚಲು ಅಮ್ಟಾಡಿ, ಕುರಿಯಾಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜಿಕಲ್ಲು ಇದರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಮಾತನಾಡಿ ತಾಯಿಯ ಆರೋಗ್ಯವನ್ನು ಅವಲಂಬಿಸಿ ಮಗುವಿನ ಆರೋಗ್ಯ ನಿಂತಿದೆ. ಆದ್ದರಿಂದ ತಾಯಂದಿರು ಆಹಾರ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಪುರಸಭಾ ಸದಸ್ಯ ಜಗದೀಶ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಸುಗುಣ ಕಿಣಿ, ಮಹಮ್ಮದ್ ಶರೀಫ್, ಪ್ರಭಾ ಆರ್ ಸಾಲ್ಯಾನ್ ವೇದಿಕೆಯಲ್ಲಿದ್ದರು. ಮಹಿಳಾಮ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಮಂಡಳಿಯ ಪ್ರಾತ್ಯಕ್ಷಿಕೆ ಅಧಿಕಾರಿ ಶಿವದರ್ಶನ್ ತ್ರಿಪಾಠಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕತರ್ೆ ಸುಲೋಚನಾ ಸ್ವಾಗತಿಸಿ, ವಿಶಾಲಾಕ್ಷಿ ವಂದಿಸಿದರು. ಮಂದಕಿನಿ ಭಟ್ ನಿರೂಪಿಸಿದರು.

