sathish baikampady

ಸುರತ್ಕಲ್: ಕಳೆದ ಮೇ 14ರಂದು ಕಾಂಗ್ರೆಸ್ ಹಿರಿಯ ನಾಯಕ, ಬೈಕಂಪಾಡಿ ಮೊಗವೀರ ಮಹಾಸಭಾ ಸಂಘಟನೆಯ ಮಾಜಿ ಅಧ್ಯಕ್ಷ ಗಂಗಾಧರ ಪಾಂಗಳರನ್ನು ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಇನ್ನೂ ಸೆರೆಸಿಕ್ಕಿಲ್ಲ. ಪೊಲೀಸ್ ದಾಖಲೆಯಲ್ಲಿ ನಾಪತ್ತೆಯಾಗಿಯೇ ಉಳಿದಿರುವ ಆರೋಪಿಯನ್ನು ಬಂಧಿಸಲು ಪೊಲೀಸರು ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪ ಕೂಡಾ ಕೇಳಿಬಂದಿದೆ.

 

gangadhar pangal
gangadhar pangal

 

gangadhar pangal body
gangadhar pangal body

 

sathish baikampady
sathish baikampady

 

ಗಂಗಾಧರ ಪಾಂಗಳರ ಸ್ಕೂಟರ್ ನಿಂದ ಡಿಕ್ಕಿ ಹೊಡೆಸಿ ಕೊಲೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸತೀಶ್ ಬೈಕಂಪಾಡಿ ಸಹೋದರ ಭಾಸ್ಕರ್ ಬೈಕಂಪಾಡಿ, ಹರೀಶ್ ಬೈಕಂಪಾಡಿ ಮತ್ತು ವಾಹನ ಚಾಲಕ ಪುಷ್ಪರಾಜ್ರನ್ನು ಪಣಂಬೂರು ಪೊಲೀಸರು ಈ ಹಿಂದೆಯೇ ಬಂಧಿಸಿದ್ದಾರೆ. ಆದರೆ ಪ್ರಕರಣದ ಸೂತ್ರಧಾರಿ ಸತೀಶ್ ಬೈಕಂಪಾಡಿ ಆರಾಮಾಗಿ ಜಿಲ್ಲೆಯಲ್ಲೇ ತಿರುಗಾಡಿಕೊಂಡಿದ್ದರೂಪೊಲೀಸರು ಬಂಧಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಆರೋಪಿ ಸತೀಶ್ ಬೈಕಂಪಾಡಿಯನ್ನು ಬಂಧಿಸಬೇಕೆಂದು ಹಲವಾಋಉ ಸಂಘಟನೆಗಳು ಬೀದಿಗಿಳಿದ್ದರೂ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ೀ ಹಿನ್ನೆಲೆಯಲ್ಲಿ ಆರೋಪಿ ಅನಾಯಾಸವಾಗಿ ಸ್ಥಳದಿಂದ ಪಾಲಾಯನಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ಆರೋಪಿಯ ಬಗ್ಗೆ ಮಾಹಿತಿ ಕೊಡಿ ಎಂದ ಎಸ್ ಐ ಭಾರತಿ

ಆರೋಪಿ ಸತೀಶ್ ಬೈಕಂಪಾಡಿಯ ಬಗ್ಗೆ ನಿಮಗೆ ಮಾಹಿತಿ ಇದ್ದರೆ ನಮಗೆ ಕೊಡಿ, ಆತನನ್ನು ಆದಷ್ಟು ಬೇಗ ಬಂಧಿಸುತ್ತೇವೆ  ಎಂದು ಸಾರ್ವಜನಿಕರಲ್ಲಿ ಪಣಂಬೂರು ಠಾಣೆಯ ಎಸ್ ಐ ಭಾರತಿ ವಿನಂತಿಸಿದ್ದಾರೆ

 

By suddi9

Leave a Reply

Your email address will not be published. Required fields are marked *