ಮೂಡುಬಿದಿರೆ: ಯಾವುದೇ ಅನ್ವೇಷಣೆಯನ್ನು ಮಾಡಬೇಕಾದರೆ ಅವಲೋಕನೆ ತುಂಬ ಮುಖ್ಯವಾಗಿರುತ್ತದೆ. ಸಂಶೋಧನೆಯಲ್ಲಿಇದಕ್ಕೆತುಂಬಾ ಮಹತ್ವವಿದೆ. ಆದರಿಂದ ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಗಮನಿಸಬೇಕಾದ್ದು ತುಂಬಾ ಮುಖ್ಯ ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಡಾ. ರಾಘವೇಂದ್ರರಾವ್. ಬಿ ಹೇಳಿದರು.

ಆಳ್ವಾಸ್ ಕಾಲೇಜಿನ ಮೈಕ್ರೋ ಬಯಾಲಜಿ ವಿಭಾಗದಿಂದ ವಿವಿಧಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ `ಮೈಕ್ರೋಸ್ಪಾರ್ಕ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಈ ಆಧುನಿಕತಂತ್ರಜ್ಞಾನಕ್ಕೆ ಮೂಲ ಕಾರಣ ಮೈಕ್ರೋ ಬಯಾಲಜಿ. ಆದರೆಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೈಕ್ರೋ ಬಯಾಲಜಿ ಕಲಿಕೆಯತ್ತ ಆಸಕ್ತಿವಹಿಸುತ್ತಿಲ್ಲ. ಇಂದಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ಮೆಡಿಕಲ್‍ಕ್ಷೇತ್ರಕ್ಕೆ ಮಾತ್ರತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಮೂಲ ವಿಜ್ಞಾನದಇತರೆ ಕ್ಷೇತ್ರಗಳಿಗೂ ಸಾಕಷ್ಟು ಮಹತ್ವ ಹಾಗೂ ಪ್ರೋತ್ಸಾಹಇದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿಯೋಚಿಸಬೇಕು. ಮೈಕ್ರೋ ಬಯಾಲಜಿಕ್ಷೇತ್ರವೂಕೂಡ ಸಾಕಷ್ಟು ವ್ಯಾಪ್ತಿ ಹೊಂದಿದ್ದು, ಇದರಲ್ಲಿ ತೊಡಗಿಸಿಕೊಂಡಲ್ಲಿ ವಿಜ್ಞಾನಿಯಾಗಿ ಸಮಾಜಕ್ಕೆಕೊಡುಗೆ ನೀಡಬಹುದುಎಂದರು.

ಹಿಂದಿ ವಿಭಾಗದ ಪ್ರಾಧ್ಯಾಪಕಡಾ. ರಾಜೀವ್ ಮಾತನಾಡಿ ಮಕ್ಕಳ ಮನಸ್ಸಿನಲ್ಲಿ ಹೊಸ ವಿಚಾರಗಳನ್ನು ಸೃಷ್ಠಿ ಮಾಡಬೇಕು. ಆ ಕೆಲಸ ಇಂದುಆರಂಭವಾಗಿದೆ. ಈ ಅರ್ಥಪೂರ್ಣವಾದ ಕಾರ್ಯಗಾರದಿಂದ ಒಂದು ವಿಶೇಷ ಜ್ಞಾನದ ಬೆಳಕಿನ ಕಿಡಿಯನ್ನು ವಿದ್ಯಾರ್ಥಿಗಳಲ್ಲಿ ಹತ್ತಿಸಿದಂತಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಮೈಕ್ರೋ ಬಯಾಲಜಿ ವಿಭಾಗದಿಂದ ಆಯೋಜಿಸಿದ್ದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿಗೆದ್ದ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹುಮಾನ ವಿತರಿಸಲಾಯಿತು. ರೋಗಗಳ ಮೂಲ, ಮೈಕ್ರೋ ಬಯಾಲಜಿ ಪ್ರಪಂಚ, ನಿಫಾ ವೈರಸ್ ಮುಂತಾದ ವಿಷಯಗಳ ಇಪ್ಪತ್ತಕ್ಕೂ ಹೆಚ್ಚು ಪೋಸ್ಟರ್ ರಚಿಸಿ ಪ್ರದರ್ಶನಕ್ಕೆಇಡಲಾಗಿತ್ತು.

ಕಾರ್ಯಗಾರದಲ್ಲಿ ಆಳ್ವಾಸ್, ಮಹಾವೀರ, ಮಿಜಾರು ಸರ್ಕಾರಿಕಾಲೇಜು, ನಿಟ್ಟೆಕಾಲೇಜು ಮತ್ತುಜೈನಕಾಲೇಜಿನ ಪಿಯುಸಿ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ರಮ್ಯ ರೈ ಎಮ್, ಮೈಕ್ರೋ ಬಯಾಲಜಿ ಮುಖ್ಯಸ್ಥೆ ರಮ್ಯ ರೈ ಉಪಸ್ಥಿತರಿದ್ದರು.
