ಮೂಡುಬಿದಿರೆ : ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆಗೆ ಹೊರಕ್ಕೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಬೆಳುವಾಯಿ ಸಮೀಪದ ಕೆಸರ್‍ಗದ್ದೆ ಎಂಬಲ್ಲಿ ನಡೆದಿದೆ. ಕಲ್ಲಬೆಟ್ಟು ನೂಯಿ ನಿವಾಸಿ ವಿಠಲ್ ಬುಣ್ಣನ್ ಅವರ ಪುತ್ರ ಮನೋಹರ (29) ಮೃತ ಪಟ್ಟವರು.

manohara-death

ಇವರು ಮೂಡುಮಾರ್ನಾಡಿನ ನಿವಾಸಿ ಹರೀಶ್ ಎಂಬವರ ಆಟೋ ರಿಕ್ಷಾದಲ್ಲಿ ಕಳೆದ ಗುರುವಾರ ರಾತ್ರಿ ಮೂಡುಬಿದಿರೆ ಕಡೆಯಿಂದ ಬೆಳುವಾಯಿ ಕಡೆಗೆ ಪ್ರಯಾಣಿಸುತ್ತಿದ್ದರು. ಕೆಸರ್‍ಗದ್ದೆ ಸಮೀಪ ಚಾಲಕನ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಮನೋಹರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಕೂಡಲೇ ಇಲ್ಲಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತ ಮನೋಹರ ರಿಕ್ಷಾ ಚಾಲಕ ಹರೀಶ್‍ನ ಆಪ್ತ ಸ್ನೇಹಿತ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *