ಉಡುಪಿ: ಥಟ್ಟಣೆ ನೋಡುವಾಗ ಇದು ಬೈಕ್ ನಿಲ್ಲಿಸುಲು ಜಾಗ ಅಂತ ಅನ್ನಿಸಿಬಿಡಬೇಕು. ಆದರೆ ಇದು ಬೈಕ್ ನಿಲ್ಲಿಸಲು ಮಾಡಿದ ಜಾಗವಲ್ಲ. ಇದು ಕಾಪುವಿನ ರಾ.ಹೆ. 66ರಲ್ಲಿ ಕಂಡುಬಂದಿರುವ ಅರ್ಧಕ್ಕೆ ನಿಂತಿರುವ ಅಂಡರ್ಪಾಸ್ನ ದೃಶ್ಯ. ಇಲ್ಲಿ ಕಾಮಗಾರಿ ಯಾವತ್ತು ಮುಗಿಯುತ್ತೋ ಭಗವಂತನೇ ಬಲ್ಲ. ಅಲ್ಲಲ್ಲಿ ಡೈವರ್ಷನ್, ಸರ್ಕಲ್, ಅಂಡರ್ಪಾಸ್ ನಿಮರ್ಾಣದ ಹೆಸರಲ್ಲಿ ರಸ್ತೆ ಕಾಮಗಾರಿ ತೆವಳುತ್ತಾ ಸಾಗಿರುವ ಕಾರಣ ವಾಹನ ಸವಾರರ ಪ್ರಾಣಕ್ಕೂ ಇಲ್ಲಿ ಭದ್ರತೆಯಿಲ್ಲ. ಅಲ್ಲಲ್ಲಿ ಸೇತುವೆ, ಅಂಡರ್ಪಾಸ್ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿದ್ದು ವಾಹನ ಸವಾರರ ಪರದಾಟ ಇನ್ನೂ ತಪ್ಪಿಲ್ಲ.

ಕಾಪುವಿನ ಪ್ರಸಿದ್ಧ ಮಾರಿಯಮ್ಮ ದೇವಸ್ಥಾನದ ಮುಂದೆಯೂ ಜನರಿಗೆ ಅನುಕೂಲವಾಗಲಿ ಎಂದು ಅಂಡರ್ಪಾಸ್ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿತ್ತು. ಆದರೆ ಕಾಮಗಾರಿ ಪೂತರ್ಿಗೊಳ್ಳದೆ ಅರ್ಧಕ್ಕೆ ಬಾಕಿಯಾಗಿರುವ ಕಾರಣ ಅದರಡಿ ವಾಹನಗಳನ್ನು ಪಾಕರ್ಿಂಗ್ ಪ್ಲೇಸ್ ಆಗಿ ಬಳಕೆಯಾಗುತ್ತಿದೆ.
ಕಾರ್, ಬೈಕ್ಗಳನ್ನು ಎಲ್ಲೆಂದರಲ್ಲಿ ಪಾಕರ್್ ಮಾಡಿ ತೆರಳುವವರಿಂದಾಗಿ ಇದರೊಳಗೆ ಜನರು ಸಂಚಾರ ನಡೆಸುವಂತಿಲ್ಲ. ಕಾಪು ದೇವಸ್ಥಾನದ ಎದುರಿನ ಅಂಡರ್ಪಾಸ್ ಕಾಮಗಾರಿ ಅರ್ಧಕ್ಕೇ ನಿಂತಿರುವುದು ಕ್ಷೇತ್ರಕ್ಕೆ ಬರುವ ಭಕ್ತರಿಗೂ ಸಮಸ್ಯೆಯಾಗುತ್ತಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ಕುಮಾರ್ ಸೊರಕೆ ಅವರು ಇದೇ ಊರಿನವರಾಗಿದ್ದೂ ಕಾಮಗಾರಿ ವೇಗ ಪಡೆಯದಿರುವುದು ಜನರನ್ನು ಸಮಸ್ಯೆಗೀಡು ಮಾಡಿದೆ.
ಜನರು ಕೇಳುವುದು ಒಂದೇ. ಸ್ವಾಮೀ ಕಾಪುವಿನ ಅಂಡರ್ಪಾದ್ ಪೂರ್ಣಗೊಳ್ಳುಉವು ಯಾವಾಗ?


