ನವದೆಹಲಿ: ಭಾಗಶಃ ಸೂರ್ಯಗ್ರಹಣವನ್ನು ನೋಡಲು ಜಗತ್ತು ಕಾದು ನಿಂತಿದೆ.
ಇಂದು ಗೋಚರಿಸಲಿರುವ ಸೂರ್ಯಗ್ರಹಣ ಮಧ್ಯಾಹ್ನ 1.30 ರಿಂದ 5.02 ಗಂಟೆಯ ನಡುವೆ ಗೋಚರಿಸಲಿದೆ. ಏಷ್ಯಾದ ಬಹುತೇಕ ಪ್ರದೇಶ, ಯುರೋಪ್, ಐಸ್‍ಲ್ಯಾಂಡ್, ಗ್ರೇನ್‍ಲ್ಯಾಂಡ್ ಹಾಗೂ ಕೆನಡಾದ ಉತ್ತರ ಹಾಗೂ ಪೂರ್ವ ಭಾಗದಿಂದ ಗ್ರಹಣ ಗೋಚರಿಸಲಿದೆ.

sun eclipse
ಇಂದಿನ ಸೂರ್ಯಗ್ರಹಣ ವರ್ಷದ ಕೊನೆಯ ಗ್ರಹಣವಾಗಲಿದ್ದು, ತಿಂಗಳ ಒಳಗಿನ ಅವಧಿಯಲ್ಲಿ ಉಂಟಾಗುತ್ತಿರುವ ಮೂರನೇ ಗ್ರಹಣವಾಗಿದೆ.
ಗ್ರಹಣವು ತನ್ನ ತುತ್ತತುದಿಯಲ್ಲಿರುವ ವೇಳೆ ಸೂರ್ಯನ 71% ಭಾಗದಷ್ಟನ್ನು ಚಂದ್ರ ಆವರಿಸಿರುತ್ತಾನೆ. ಮುಂದಿನ ಭಾಗಶಃ ಸೂರ್ಯ ಗ್ರಹಣವು ಜನವರಿ 6, 2019ರಲ್ಲಿ ಸಂಭವಿಸಲಿದೆ ಎಂದು ನಾಸ ಹೇಳಿದೆ.
ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಬಂದ ವೇಳೆ, ಭೂಮಿಯ ಮೇಲೆ ಇದರ ನೆರಳು ಬೀಳುವ ಕಾರಣ ಸೂರ್ಯ ಗ್ರಹಣ ಸಂಭವಿಸಲಿದೆ.

By suddi9

Leave a Reply

Your email address will not be published. Required fields are marked *