ಮೂಡುಬಿದಿರೆ : ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2018ರ ಸ್ವಚ್ಛ ಸರ್ವೇಕ್ಷಣೆ ರಥವು ಶಿರ್ತಾಡಿ ಗ್ರಾ.ಪಂ.ಗೆ ಮಂಗಳವಾರ ಭೇಟಿ ನೀಡಿದ್ದು ಗ್ರಾ.ಪಂ ಎದುರು ಸ್ವಚ್ಛತೆಯ ಕರಪತ್ರಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಗ್ರಾ.ಪಂ ಅಧ್ಯಕ್ಷೆ ಲತಾ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್‍ನ ಕಾರ್ಯದರ್ಶಿ ರವಿ ಅವರು ಹೋಲಿ ಎಂಜೆಲ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶಿರ್ತಾಡಿ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೋನು, ಪಂಚಾಯತ್ ಸದಸ್ಯರು, ಶಿರ್ತಾಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ನಸೀಬಾ, ಆರೋಗ್ಯ ಸಹಾಯಕಿಯರಾದ ಪುಷ್ಪಾ ಎಸ್.ಡಿ, ಅಕ್ಷತಾ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಉಪಸ್ಥಿತರಿದ್ದರು.

