ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಉಳಿ ಗ್ರಾಮ ಪಂಚಾಯತ್ ಸಮಿತಿ ಇದರ ಆಶ್ರಯದಲ್ಲಿ ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಹಾಗೂ ಮತದಾರರ ಅಭಿನಂದನಾ ಸಭೆಯು ಕಕ್ಯಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಆ.5 ಭಾನುವಾರದಂದು ನಡೆಯಿತು.
ಈ ವೇಳೆಯಲಲಿ ಶಾಸಕರಿಗೆ ಸನ್ಮಾನಿಸಲಾಯಿತು.
ಉದ್ಯೋಗ ಸೃಷ್ಟಿ , ಶಾಂತಿಯುತ ಬಂಟ್ವಾಳ, ಮಾದರಿ ಗ್ರಾಮ ನಿರ್ಮಾಣವೇ ನನ್ನ ಗುರಿಯಾಗಿದ್ದು, ಜನರ ಎಲ್ಲಾ ರೀತಿಯ ಸಮಸ್ಯೆಗೆ ಸೂಕ್ತ ರೀತಿಯಾಗಿ ಸ್ಪಂದಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಬಿಜೆಪಿ ಉಳಿ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸಿನ ಅಧಿಕಾರದ ಅವಧಿಯಲ್ಲಿ ಭ್ರಷ್ಟಚಾರ, ಅನಾಚಾರ ನಡೆದಿದೆ. ಇದರಿಂದಾಗಿ ಭಾರತದ ಸ್ಥಿತಿ ಹೀನಾಯವಾಗಿದ್ದು, ದೇಶವನ್ನು ಅದ:ಪತನಕ್ಕೆ ತಳ್ಳಿದ್ದರು. ಆದರೆ ನಂತರ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿ ಗುರುತಿಸಿರುವ ಪ್ರಧಾನಿ ನರೇಂದ್ರ ಮೋದಿ ಅದ್ಭುತವಾದ ಆಡಳಿತವನ್ನು ನೀಡಿ, ದೇಶಕ್ಕೆ ಮಾದರಿಯಾಗಿದ್ದು, ಭವಿಷ್ಯದಲ್ಲೂ ಭವ್ಯ ಭಾರತದ ಕನಸನ್ನು ಹೊತ್ತಿರುವ ಅವರ ಕೈಯನ್ನು ಬಲಪಡಿಸಬೇಕು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ಷೇತ್ರದ ಅಭಿವೃದ್ಧಿಗೆ 14 ಸಾವಿರ ಕೋಟಿ ರೂ. ಅನುದಾನವನ್ನು ಕೇಂದ್ರದಿಂದ ಬಿಡುಗಡೆಗೊಳಿಸಿದ್ದಾರೆ ಆದರೆ ಕಾಂಗ್ರೆಸಿಗರು ಈ ಬಗ್ಗೆ ಅರಿವಿಲ್ಲದೆ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಸಂಗಬೆಟ್ಟು ಜಿಲ್ಲಾ ಪಂಚಾಯತ್ ಸದಸ್ಯ ಎಂ. ತುಂಗಪ್ಪ ಬಂಗೇರ, ಉಳಿ ಗ್ರಾ.ಪಂ. ಉಪಾಧ್ಯಕ್ಷ ಸುರೇಶ್ ಮೈರ, ಬಿಜೆಪಿ ಪ್ರಮುಖರಾದ ಚಿದಾನಂದ ರೈ ಕಕ್ಯಪದವು, ಶಶಿಕಾಂತ್ ಶೆಟ್ಟಿ ಆರುಮುಡಿ, ಗುಲಾಬಿ ಮಾಡೋಡಿ, ಸುದರ್ಶನ್ ಬಜ, ಚೇತನ್ ಊರ್ದೊಟ್ಟು, ರೇವತಿ ಮುದಲಾಡಿ, ರಾಜ್ಕುಮಾರ್ ಬಳ್ಳಿ, ರೋಹಿನಾಥ, ಯಶವಂತ, ಯತೀಶ್, ವಿಠಲ ಭಂಡಾರಿ ಪುಣ್ಕೆದಡಿ, ಜಯಶ್ರೀ ಸುರೇಂದ್ರ, ರವಿ ಶೆಟ್ಟಿ, ನಾರಾಯಣ ಪೂಜಾರಿ, ನಾರಾಯಣ ಗೌಡ, ಸನತ್, ಮಹಾಬಲ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಂಜಿತ್ ಮೈರ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಕಾಶ್ ಕರ್ಲ ಮತ್ತು ವೃಷಭ ರಾಜ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

