ಮೂಡುಬಿದಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಆಳ್ವಾಸ್ ಸಮಾಜಕಾರ್ಯ ವಿಭಾಗ ಮತ್ತು ಪೌಷ್ಠಿಕ ಆಹಾರ ವಿಭಾಗದ ಸಹಯೋಗದೊಂದಿಗೆ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಾಹಿತಿ ಕಾರ್ಯಕ್ರಮ ಹಾಗೂ ತುಡರ್ ಚಾರಿಟೇಬಲ್ ಟ್ರಸ್ಟ್ ತೋಡಾರು ಇವರ ವತಿಯಿಂದ ಅಂಗನವಾಡಿ ಕೇಂದ್ರ ಮಿಜಾರು ಶಾಲೆ ಇಲ್ಲಿನ ಪುಟಾಣಿಗಳಿಗೆ ಮಂಗಳವಾರ ಸಮವಸ್ತ್ರ ವಿತರಿಸಲಾಯಿತು.

stanyapana sapthaha
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿ ಭವಾನಿ ಎದೆ ಹಾಲಿನ ಮಹತ್ವದ ಬಗ್ಗೆ, ಕಿರಿಯ ಆರೋಗ್ಯ ಸಹಾಯಕಿ ರೋಸಮ್ಮ ಸ್ವಚ್ಛ ಗೆಳತಿ ಬಗ್ಗೆ ಮಾಹಿತಿ ನೀಡಿದರು.
ಆಳ್ವಾಸ್ ವಿದ್ಯಾರ್ಥಿಗಳಿಂದ ಸ್ತನ್ಯಪಾನದ ಮಹತ್ವದ ಬಗ್ಗೆ ಕಿರು ಪ್ರಹಸನ ನಡೆಯಿತು.
ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ತಾಯಂದಿರು, ಸ್ತ್ರೀ ಶಕ್ತಿ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಒಟ್ಟು 90 ಮಂದಿ ಹಾಜರಿದ್ದರು.

ಈ ಸಂದರ್ಭದಲ್ಲಿ ತುಡರ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸುನೀಲ್ ಶೆಟ್ಟಿ, ಸದಸ್ಯ ನವೀನ್ ಶೆಟ್ಟಿ, ಆಳ್ವಾಸ್ ಪೌಷ್ಠಿಕ ಆಹಾರ ವಿಭಾಗದ ಮುಖ್ಯಸ್ಥೆ ಆಶಿತಾ, ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಉಪಸ್ಥಿತರಿದ್ದರು.
ಇಲಾಖೆಯ ವಲಯ ಮೇಲ್ವೀಚಾರಕಿ ಭಾರತಿ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ನಿರೂಪಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *