ಮೂಡುಬಿದಿರೆ: ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ಆಶ್ರಯದಲ್ಲಿ 8 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ರವಿವಾರ ಎಂ.ಸಿ.ಎಸ್.ಬ್ಯಾಂಕ್‍ನ ಸಭಾಂಗಣದಲ್ಲಿ ಜರುಗಿತು.

Bhandary Aati
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿ, ಭಂಡಾರಿ ಸಂಘವು ಇಂದಿಗೂ ತುಳು ಜಾನಪದ ಕ್ರೀಡೆಗೆ ಪ್ರಾಶಸ್ತ್ಯ ಕೊಡುವುದು ಹೆಮ್ಮೆಯ ವಿಷಯವಾಗಿದೆ. ತಮ್ಮ ಸಂಘಕ್ಕೆ ಯಾವ ರೀತಿಯ ಸಹಾಯಕ್ಕೂ ತಮ್ಮ ತುಳುನಾಡ ರಕ್ಷಣಾ ವೇದಿಕೆ ಸಿದ್ಧ ಎಂದು ಹೇಳಿದರು.
ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ಅಧ್ಯಕ್ಷ ಕೆ.ಎನ್.ಪ್ರಕಾಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಜಾಗೃತದಳದ ಅಧ್ಯಕ್ಷ ಸತೀಶ್ ಸಾಲಿಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಿಂದಿನ ಕಾಲದ ತಿಂಡಿ ತಿನಿಸುಗಳ, ಮನೆ ಔಷಧಿಗಳನ್ನು ನೆನಪಿಸಿದರು.
ಅತಿಥಿ, ಸಾಹಿತಿ ಹಾಗೂ ವಿಜಯಾ ಬ್ಯಾಂಕ್‍ನ ಮಾಜಿ ಪ್ರಬಂಧಕ ಗೋವಿಂದ ಭಂಡಾರಿ ಇರ್ವತ್ತೂರು ಹಿಂದಿನ ಕಾಲದ ಔಷಧ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು.
ಪತ್ರಕರ್ತ, ತುಳು ಚಲನಚಿತ್ರ ನಟ ಸುಭಾಸ್ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಮೂಡುಬಿದಿರೆ ಅಧ್ಯಕ್ಷ ರವಿರಾಜ್ ಭಂಡಾರಿ ಕರಿಂಜೆ, ನೆಲ್ಲಿಗುಡ್ಡೆ ಮಿತ್ರ ಮಂಡಳಿ ಅಧ್ಯಕ್ಷ ಪ್ರಸಾದ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ಗೌರವಾಧ್ಯಕ್ಷೆ ವಸಂತಿ ಜೆ.ಭಂಡಾರಿ, ನಿ.ಪೂ. ಅಧ್ಯಕ್ಷ ಪ್ರಶಾಂತ್ ಭಂಡಾರಿ, ಪುರಸಭಾ ಸದಸ್ಯ ಪ್ರಸಾದ್ ಕುಮಾರ್, ಸಂಘದ ಮಾಜಿ ಅಧ್ಯಕ್ಷ ರಮೇಶ್ ಭಂಡಾರಿ, ಉಪಾಧ್ಯಕ್ಷೆ ಸಂಧ್ಯಾ ಭಂಡಾರಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಆದ್ಯಾ ಭರತನಾಟ್ಯ ಪ್ರದರ್ಶಿಸಿದರು. ವಿವಿಧ ಜಾನಪದ ಕ್ರೀಡೆಗಳು ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಮಾರು 57 ಬಗೆಯ ತಿಂಡಿ ತಿನಿಸುಗಳನ್ನು ಭಂಡಾರಿ ಸಮಾಜ ಬಾಂಧವರು ತಯಾರಿಸಿ ತಂದಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ ಕರಿಂಜೆ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಗುರುಪ್ರಸಾದ್ ಭಂಡಾರಿ ವಂದಿಸಿದರು.

By Suddi9

Leave a Reply

Your email address will not be published. Required fields are marked *