ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ವುಮೆನ್ ಡೆವಲೆಪ್‍ಮೆಂಟ್ ಸೆಲ್ ಐಕ್ಯೂಎಸಿ ಸಂಯೋಜಿಸಿದ “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ” ವಿಷಯದ ಕುರಿತು ಕಾರ್ಯಕ್ರಮವು ಮಂಗಳವಾರ ಕಾಲೇಜಿನ ಕುವೆಂಪು ಹಾಲ್‍ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕನಾಟಕದ ಪ್ರಥಮ ಮಹಿಳಾ ಐಜಿಪಿ ಡಿ. ರೂಪಾ  ಮುಖ್ಯ ಅತಿಥಿಯಾಗಿದ್ದರು.

roopa d (4)
“ಮಹಿಳೆ ತಾನು ಯಾವ ಪ್ರಭಾವ ಇಲ್ಲದೆ, ತಾನೇ ಸ್ವತಃ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಶಕ್ತಳಾಗಬೇಕು. ಆರ್ಥಿಕವಾಗಿ ಸದೃಡಳಾದರೆ ಮಾತ್ರ ಆಕೆ ಸಮಾಜದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯ. ಸಾಮಾನ್ಯವಾಗಿ ಸಮಾಜದಲ್ಲಿ ಮಹಿಳೆ ಜೀವನಕ್ಕೆ ಪ್ರಾಥಮಿಕ ಕೆಲಸ ಮಾಡಲು ಮಾತ್ರ ಸೀಮಿತ ಎಂಬ ಕಲ್ಪನೆ ಇದೆ. ಆದರೆ ಆಕೆಗೂ ತನ್ನ ಪರಿಸ್ಥಿತಿಗೆ ಅನುಗುಣವಾಗಿ ಸ್ವಂತ ಉದ್ದಿಮೆ, ಸಣ್ಣ ಉದ್ದಿಮೆಗಳನ್ನು ಮಾಡಿ ತಮ್ಮ ಸಾಮಥ್ಯವನ್ನು ಹೊರಹಾಕಲು ಅವಕಾಶ ಇದೆ” ಎಂದು ಹೇಳಿದರು.

roopa d (3)
ಸ್ವಪ್ರೇರೇಪಣೆಯಿಂದ ನಮ್ಮ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು. ಒಬ್ಬ ವ್ಯಕ್ತಿ ತನಗೆ ತಾನೇ ಹಿಪ್ನೊಟೈಸ್ ಮಾಡುವುದರಿಂದ ಸಾಧನೆಯ ಛಲ ಹೆಚ್ಚುತ್ತದೆ. ಪ್ರತಿಯೊಬ್ಬರು ಕನಸು ಕಾಣಬೇಕು. ಕನಸೇ ಸಾಧನೆಗೆ ಬುನಾದಿ. ಕನಸು ಕಾಣುವುದು ಮಾತ್ರವಲ್ಲದೇ ಅದನ್ನು ಕಾರ್ಯರೂಪಕ್ಕೆ ತರಬೇಕು. ವಿದ್ಯಾರ್ಥಿಗಳು ಉತ್ತಮ ಹಾದಿಯಲ್ಲಿ ಸಾಗಲು ಶಿಕ್ಷಕರ ಪಾತ್ರ ಮಹತ್ತರವಾದುದು. ಅಲ್ಲದೇ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಹೊಂದಿರಬೇಕು. ಸಣ್ಣ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಬೇಕು. ಅಪಾಯವನ್ನು ಎದುರಿಸಿ ಮುನ್ನಡೆಯುವ ವ್ಯಕ್ತಿಗಳೇ ಯಶಸ್ಸನ್ನು ಕಾಣುತ್ತಾರೆ.

roopa d (5)
ಪ್ರತಿಯೊಬ್ಬ ಮನುಷ್ಯನ ಸೋಲೆ ಸಾಧನೆಯ ಮೆಟ್ಟಿಲಾಗಿದೆ. ಯಾವುದೇ ಹಾದಿಯಲ್ಲಿ ಮುನ್ನಡೆಯುವ ಮುನ್ನ ನಮ್ಮನ್ನು ನಾವು ಸಿದ್ಧಪಡಿಸಬೇಕು. ಸೋಲನ್ನು ಅವಕಾಶವನ್ನಾಗಿ ಉಪಯೋಗಿಸಿ ಸನ್ಮಾರ್ಗದಲ್ಲಿ ಕೆಲಸ ಮಾಡಬೇಕು. ಯಾವುದೇ ಕಾರ್ಯವನ್ನು ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ಮಾಡಿದರೆ ಫಲ ಸಿಗುತ್ತದೆ. ಮಾಡುವ ಕೆಲಸದಲ್ಲಿ ಸ್ಪಷ್ಡತೆ ಇದ್ದು, ನಿಯಮದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಉತ್ತಮ. ಕಾಲಹರಣದ ಹೊರತಾಗಿ ಮಾಡುವ ಕೆಲಸದಲ್ಲಿ ತೃಪ್ತಿ ಇರುತ್ತದೆ ಎಂದರು.
ಇಂದಿನ ಯುವಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದ್ದು, ತಮ್ಮ ಆಗುಹೋಗುಗಳನ್ನು ಅದರ ಮೂಲಕ ವ್ಯಕ್ತಪಡಿಸುತ್ತಾರೆ. ಅದರ ಬದಲಾಗಿ ಹಿರಿಯರು, ಪೋಷಕರಲ್ಲಿ ಹಂಚಿಕೊಂಡರೆ ಅದಕ್ಕೆ ತಕ್ಕ ಪರಿಹಾರ ಸಿಗುತ್ತದೆ. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ. ಆದರೆ ದುರಂತ ಎಂದರೆ ಕೆಲವರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವಿಫಲರಾಗತ್ತಾರೆ. ಪಾಶ್ಚಿಮಾತ್ಯ ದೇಶದ ಜನರು ತಮ್ಮ ಎಲ್ಲಾ ಸಾಧನೆಯ ನಂತರ ಭಾರತದ ಕಡೆಗೆ ಬಂದು ಇಲ್ಲಿಯ ಸಂಸ್ಕøತಿಯನ್ನು ಪಾಲಿಸುತ್ತಾರೆ. ಅದಕ್ಕಾಗಿ ನಾವು ನಮ್ಮ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

roopa d (1)
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ಎಲ್ಲಾ ಅಧಿಕಾರಗಳಿಗೂ ತಮ್ಮ ತಮ್ಮ ಕರ್ತವ್ಯ ತಿಳಿದಿರುತ್ತದೆ. ಕಾನೂನಿನ ಚೌಕಟ್ಟಿನಲ್ಲಿದ್ದುಕೊಂಡು ಕೆಲವೊಂದು ಬಾರಿ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಸೋಲುಗಳನ್ನು ಪಾಠದಂತೆ ಸ್ವೀಕರಿಸಿ ಮುನ್ನಡೆಯಬೇಕು.” ಎಂದು ಹೇಳಿದರು. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಬಗ್ಗೆ ಮಾಹಿತಿ ಹಾಗೂ ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಶಾಜಿಯಾ ಸಯ್ಯೆದ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆಯನ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *