ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನಲ್ಲಿ ಮೈಕ್ರೋ ಬಯೋಲಜಿ ವಿಭಾಗದ ವತಿಯಿಂದ ರಕ್ತ ವರ್ಗೀಕರಣ ಶಿಬಿರ ಕಾರ್ಯಕ್ರಮವನ್ನು ಆಳ್ವಾಸ್ ಹೆಲ್ತ್ ಸೆಂಟರ್‍ನ ಪ್ರಸೂತಿ ತಜ್ಞೆ ಡಾ|ಹನಾ ಶೆಟ್ಟಿ ಕುವೆಂಪು ಸಭಾಂಗಣದಲ್ಲಿ ಆ.1 ಬುಧವಾರದಂದು ಉದ್ಘಾಟಿಸಿದರು.

blood camp

ವಿದ್ಯಾರ್ಥಿ ಜೀವನದಿಂದಲೇ ಎಲ್ಲರೂ ರಕ್ತದಾನದಂತಹ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ ಎಂದು ತಿಳಿಸಿದರು. ಯಾವುದೇ ಸಂದರ್ಭದಲ್ಲಿ ವ್ಯಕ್ತಿಗೆ ರಕ್ತದ ಅನಿವಾರ್ಯತೆ ಬರಬಹುದು. ಅದರಲ್ಲೂ ಗರ್ಭಿಣಿ ಸ್ತ್ರೀಯರಲ್ಲಿ ಈ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಅರಿವು ಇರಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯಯುತ ದೇಹ ನಮ್ಮದಾಗುತ್ತದೆ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವಾ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ದೇಹ ದುರ್ಬಲವಾಗಿತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ರಕ್ತದಾನ ಮಾಡಿದ ಮೂರು ತಿಂಗಳಿಗೆ, ನಮ್ಮ ದೇಹದಲ್ಲಿ ರಕ್ತ ಮರುಶೇಖರಣೆಯಾಗುತ್ತದೆ. ಆದ್ದರಿಂದ ನಾವು ಯಾರ ಬಲವಂತವಿಲ್ಲದೆ ಮನಪೂರ್ವಕವಾಗಿ ರಕ್ತದಾನ ಮಾಡುವಂತಾಗಬೇಕು ಎಂದು ಹೇಳಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸೈನ್ಸ್ ವಿಭಾಗದ ಡೀನ್ ರಮ್ಯ ರೈ, ವಿಭಾಗದ ಮುಖ್ಯಸ್ಥೆ ರಮ್ಯ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಿಶೋರ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಯುಕ್ತ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *