ಮೂಡುಬಿದಿರೆ : ಮೂಡುಬಿದಿರೆ ಪುರಸಭೆಯ ನೇತೃತ್ವದಲ್ಲಿ ವಾರದ ಸಂತೆಯಾಗಿರುವ ಶುಕ್ರವಾರದಂದು ಸಂತೆಯ ಎಲ್ಲಾ ವ್ಯಾಪಾರಿಗಳಿಗೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಪ್ರದರ್ಶಿಸಿ, ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿ ಸಂತೆಗೆ ಬರುವ ವ್ಯಾಪಾರಸ್ಥರು ಪ್ಲಾಸ್ಟಿಕ್ ಕ್ಯಾರಿಬ್ಯಾಗ್,ತಳು ಗ್ರಾಸರಿ, ಪ್ಲಾಸ್ಟಿಕ್ ಕವರ್, ನಾನ್ ಪೋವನ್ ಪ್ಲಾಸ್ಟಿಕ್ ಬ್ಯಾಗ್ ಬಳಸದೆ ಪೇಪರ್ ಕವರ್, ಬ್ರೌನ್ ಪೇಪರ್, ತಿಂಡಿ ಐಟಂಗಳನ್ನು ಬಟರ್ ಪೇಪರ್ ಕವರ್‍ನಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ನೀಡಬೇಕು. ಗ್ರಾಹಕರು ತಮ್ಮದೇ ಬಟ್ಟೆ ಚೀಲಗಳನ್ನು ಅಥವಾ ಬುಟ್ಟಿಗಳನ್ನು ಖರೀದಿಗಾಗಿ ತರುವಂತೆ, ವ್ಯಾಪಾರಿಗಳು ಗ್ರಾಹಕರಿಗೆ ತಿಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಮುಖ್ಯಾಧಿಕಾರಿ ಶೀನ ನಾಯ್ಕ್ ಬಿ., ಪರಿಸರ ಅಭಿಯಂತರೆ ಶಿಲ್ಪಾ ಎಸ್, ಹಿರಿಯ ಕಂದಾಯಾಧಿಕಾರಿ ಧನಂಜಯ ಡಿ.ಬಿ, ಕಛೇರಿ ವ್ಯವಸ್ಥಾಪಕರಾದ ಸೂರ್ಯಕಾಂತ ಖಾರ್ವಿ, ದ್ವಿ.ದ.ಸ ಮಂಜುನಾಥ, ನೀರು ಸರಬರಾಜು ಸಿಬಂದಿ ಆನಂದಬಾಬು, ಕಂಪ್ಯೂಟರ್ ಅಪರೇಟರ್ ಸುಧೀಶ್ ಹೆಗ್ಡೆ, ಸಿಬಂದಿಗಳಾದ ನೇಮಣ್ಣ, ಪೌರ ಕಾರ್ಮಿಕ ರವೀಂದ್ರ ಹಾಗೂ ಆರಕ್ಷಕ ಸಿಬಂದಿ ಸುಜನ್ ಉಪಸ್ಥಿತರಿದ್ದರು.


