ಸುದ್ದಿ9ಕುಪ್ಪೆಪದವು ಮಹಿಳೆಯರ ಮೇಲೆ ಆಗುವ ದೌರ್ಜನ್ಯಕ್ಕೆ ಅವರ ಮೌನವೇ ಕಾರಣ ಎಂದು ಕುಪ್ಪೆಪದವು ಗ್ರಾಮ ಪಂಚಾಯತ್ ಶೆಟ್ಟಿರವರು ಹೇಳಿದರು. ಅವರು ಅ.30ಶನಿವಾರ ಪಂಚಾಯತ್ ಸಭಾಂಗಣದಲ್ಲಿ ಬ್ರೇಕ್ ಥ್ಯೂ -ಕನರ್ಾಟಕ ಆಯೋಜಿಸಿದ ಪಂಚಾಯತ್ ಸದಸ್ಯರಿಗೆ ಮಾನವ ಹಕ್ಕುಗಳು ಮತ್ತು ಮಹಿಳೆಯರ ಮೇಲಾಗುವ ದೌರ್ಜನ್ಯದ ಕುರಿತ ಮಾಹಿತಿ ವಿನಿಮಯ ಕಾಯರ್ಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಮೇಲೆ ದೌರ್ಜನ್ಯ ಆದಾಗ ಯಾವುದಕ್ಕೂ ಹೆದರಿ ಸುಮ್ಮನಿರದೇ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು ಆ ದನಿಗೆ ನಾವೆಲ್ಲರೂ ಶಕ್ತಿ ತುಂಬಬೇಕು ಎಂದು ಅವರು ಹೇಳೀದರು. ಬಂಟ್ವಾಳದ ಕಲಾವಿದೆ ಕು.ಸುಶೀಲ ಜಾರಂದಗುಡ್ಡೆರವರು ಪ್ರದಶರ್ಿಸಿದ ದುಗರ್ಾ ಏಕ ವ್ಯಕ್ತಿ ನಾಟಕದ ಮೂಲಕ ಚಚರ್ೆ ನಡೆದಾಗ ದೌರ್ಜನ್ಯ ನಡೆದಾಗ ನಾವು ಪ್ರತಿಭಟಿಸಲೇ ಬೇಕು ಎಂದು ಸದಸ್ಯರೆಲ್ಲರೂ ಒಕ್ಕೊರಳ ಅಭಿಪ್ರಾಯ ವ್ಯಕ್ತ ಪಡಿಸಿಸಿದರು. ಕಾರ್ಯಗಾರವನ್ನು ತರಬೇತುದಾರರಾದ ಮಂಜುಳಾ ಸುನೀಲ್ ಮತ್ತು ಭರತ್ ಎಸ್.ಕಕರ್ೆರರವರು ನಿರ್ವಹಿಸಿದರು. ಈ ತರಬೇತಿ ನಿರಂತರವಾಗಿದ್ದು ಮುಂದಿನ ಹಂತದ ತರಬೇತಿ ಸೆಪ್ಟೆಂಬರ್ 10ರಂದು ನಿಗದಿ ಪಡಿಸಲಾಯ್ತು.
ವೇದಿಕೆಯಲ್ಲಿ ಪುಷ್ಪನಾಯ್ಕ್ ಉಪಸ್ಥಿತರಿದ್ದರು. ಪಂಚಾಯತಿ ಅಧಿಕಾರಿ ಪುಷ್ಪಸಾಲ್ಯಾನ್ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.




