ಮೂಡುಬಿದರೆ: ಕೇಂದ್ರ ಸರ್ಕಾರದ `ಜನಾ-ದನ್ ನನ್ನ ಖಾತೆ ಭಾಗ್ಯ ವಿಧಾತೆ’ ಯೋಜನೆಯ ಬಗ್ಗೆ ತೆಂಕಮಿಜಾರು ಗ್ರಾ.ಪಂನಲ್ಲಿ ವತಿಯಿಂದ ಗ್ರಾಮಸ್ಥರಿಗೆ ಸೋಮವಾರ ಮಾಹಿತಿ ಶಿಬಿರ ನೀಡಲಾಯಿತು.

ತೆಂಕಮಿಜಾರು ಪಂಚಾಯಿತಿಯಲ್ಲಿ ಜನಾ ಧನ್ ಮಾಹಿತಿ ಶಿಬಿರ ನಡೆಯಿತು.
ಗ್ರಾ.ಪಂ ಅಧ್ಯಕ್ಷೆ ಉಮಾವತಿ ಶಿಬಿರ ಉದ್ಘಾಟಿಸಿದರು. ಸ್ಥಳೀಯ ವಿಜಯಾ ಬ್ಯಾಂಕ್ನ ಮೆನೇಜರ್ ಪ್ರಮೋದ್ ಮಾಹಿತಿ ನೀಡಿ, ಜನಾ-ಧನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆ. 2010ರಲ್ಲಿಯೇ ಈ ಯೋಜನೆಯನ್ನು ಜಾರಿಗೆ ಬಂದಿದ್ದು, ಆದರೆ ಅದಕ್ಕೆ ವೇಗ ಸಿಕ್ಕಿದ್ದು ಈ ವರ್ಷದಿಂದ. ಕೇಂದ್ರ ಸರ್ಕಾರದ ಅಧೀನದಲ್ಲಿ 29 ರಾಷ್ಟ್ರೀಕೃತ ಬ್ಯಾಂಕ್ಗಳಿದ್ದು ಇವುಗಳಲ್ಲಿ ಪ್ರತಿಯೊಂದು ಮನೆಯವರು ಕೂಡಾ ಖಾತೆಯನ್ನು ಹೊಂದಬೇಕೆನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ತರಲಾಗಿದೆ. ಒಂದು ಮನೆಯಲ್ಲಿ ಇಬ್ಬರು ಗಂಡಸರು ಮತ್ತು ಒಬ್ಬ ಮಹಿಳೆಯು ಖಾತೆಯನ್ನು ಮಾಡಿ ಅದಕ್ಕೆ ಐದೈದು ಸಾವಿರವನ್ನು ರೂಪಾಯಿಗಳನ್ನು ಹಾಕುವುದಲ್ಲದೆ ಒಂದು ಲಕ್ಷ ವಿಮಾ ಪಾಲಿಸಿಯನ್ನು ಮಾಡುವ ಯೋಚನೆಯನ್ನು ಮಾಡಿದೆ ಇದಕ್ಕೆ 2 ಫೊಟೋ ಸಹಿತ ಆದಾಯ ಪತ್ರವನ್ನು ತಂದರೆ ಸಾಕು . ಅವರು ಅಲ್ಲದೆ 18 ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕ್ ಖಾತೆಯನ್ನು ಹೊಂದಬೇಕೆನ್ನುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ಹೇಳಿದರು.
ಪಿಡಿಒ ಸಾಯೀಶ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷೆ ಮುತ್ತು ಉಪಸ್ಥಿತರಿದ್ದರು. ಸಿಬಂದಿ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
