ಸುದ್ದಿ9ಮೂಡುಬಿದರೆ : ಮಕ್ಕಳ ಉತ್ತಮ ಬೆಳವಣಿಗೆಗೆ ಪೌಷ್ಠಿಕ ಆಹಾರ ಅಗತ್ಯ. ಬೆಳವಣಿಗೆಗೆ ಪೂರಕವಾದ ಸ್ವಚ್ಛ ಪರಿಸರ, ಆಹಾರವನ್ನು ಮಕ್ಕಳಿಗೆ ನೀಡಿದರೆ ಅವರು ಶಕ್ತಿಶಾಲಿಯಾಗಿ, ಉತ್ತಮ ಮಕ್ಕಳಾಗಿ ಮೂಡಿಬರಲು ಸಾಧ್ಯ ಎಂದು ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ. ಹೇಳಿದರು.
ಅವರು ಪೌಷ್ಠಿಕ ಆಹಾರ ಸಪ್ತಾಹದಂಗವಾಗಿ ಪುಚ್ಚೇರಿಕಟ್ಟೆ, ಆಲಂಗಾರು, ಕೋಟೆಬಾಗಿಲು ಮತ್ತು ಮರಿಯಾಡಿ ಅಂಗನವಾಡಿ ಕೇಂದ್ರಗಳು ಜಂಟಿಯಾಗಿ ಗುರುವಾರ ಅಲಂಗಾರಿನ ಸೈಂಟ್ ಥೋಮಸ್ ಚಚರ್್ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ ಪೌಷ್ಠಿಕ ಆಹಾರ ಸಪ್ತಾಹ-2014ನ್ನು ಉದ್ಘಾಟಿಸಿ ಮಾತನಾಡಿದರು.
ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರದ ಶಿಕ್ಷಣಾಧಿಕಾರಿ ಸುಶೀಲ ಅವರು ಮಾಹಿತಿ ನೀಡಿ ನಾವು ಸೇವಿಸುವ ಆಹಾರದಲ್ಲಿ ಕಾಬರ್ೋಹೈಡೆಡ್, ಏಕದಳ, ಪ್ರೊಟೀನ್, ಕೊಬ್ಬು ಮತ್ತು ವಿಟಮಿನ್ಗಳು ಇರುವ ಪೌಷ್ಠಿಕಾಂಶದ ಆಹಾರಗಳನ್ನು ಮಕ್ಕಳಿಗೆ ನೀಡುವುದರಿಂದ ಬೆಳವಣಿಗೆಗೆ ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಅಲಂಗಾರು ಚಚರ್ಿನ ಧರ್ಮಗುರು ರೆ.ಫಾ ಬೀಸಿಲ್ ವಾಸ್,ಶಿತರ್ಾಡಿ ವಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ರತಿಶೆಟ್ಟಿ, ಪುರಸಭಾ ಸದಸ್ಯರಾದ ಪಿ.ಕೆ.ಥೋಮಸ್, ಸುರೇಶ್ ಕೋಟ್ಯಾನ್, ರಮಣಿ, ರಾಜೇಶ್ ಕೋಟೆಗಾರ್, ರೋಟರಿ ಕ್ಲಬ್ನ ಸದಸ್ಯ ದಯಾನಂದ ಮಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪುಚ್ಚೇರಿಕಟ್ಟೆ ಅಂಗನವಾಡಿ ಕೇಂದ್ರದ ಕಾರ್ಯಕತರ್ೆ ವಿಜಯಾ ಸ್ವಾಗತಿಸಿದರು. ಆಲಂಗಾರು ಅಂಗನವಾಡಿ ಕೇಂದ್ರದ ಕಾರ್ಯಕತರ್ೆ ಯಮುನಾ ವಂದಿಸಿದರು. ಅಂಗನವಾಡಿ ಕಾರ್ಯಕತರ್ೆಯರಾದ ಹೇಮಾ, ನಿರ್ಮಲ ಸಹಕರಿಸಿದರು.

