ಇತ್ತೀಚೆಗೆ ನಿವೃತ್ತರಾದ ಮುಖ್ಯ ಶಿಕ್ಷಕ ದೇವದಾಸ ಕೆ. ಆರ್ ರವರ ವಿದಾಯ ಸಮಾರಂಭದ ನಡೆಯಿತು.
ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು ಪ್ರತೀ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿ ಅವರ ಸಾಧನೆಯಲ್ಲಿ ಖುಷಿಪಟ್ಟು ಸಂಭ್ರಮಿಸುವ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಆದರ್ಶರಾಗಿರುತ್ತಾರೆ. ಎಂದು ಅನುದಾನಿತ ಶ್ರೀ ರಾಮ ಹಿ.ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಂ ಶೇಖರವರು ಎಂದು ಹೇಳಿದರು.
ಈ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ದೇವದಾಸ ಕೆ. ಆರ್ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಜ್ಯೋತಿ ಕುಮಾರಿಯವರನ್ನು ಸನ್ಮಾನಿಸಲಾಯಿತು. ವಿದಾಯ ಸನ್ಮಾನ ಸ್ವೀಕರಿಸಿದ ಮುಖ್ಯ ಶಿಕ್ಷಕರು ಮಾತನಾಡಿ ಶಿಕ್ಷಕನಾಗಿರುವುದಕ್ಕಾಗಿ ಸಮಾಜದಲ್ಲಿ ಬಹಳಷ್ಟು ಗೌರವಕ್ಕೆ ಪಾತ್ರರಾಗಿದ್ದೇವೆ. ಅವರ ಹಾರೈಕೆಗಳಿಗೆ ಚಿರರುಣಿಯಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಫರಂಗಿಪೇಟೆ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಮಂಜುನಾಥ ಶೆಣೈ, ಶಾಲಾ ಸಮಿತಿ ಸದಸ್ಯರಾದ ಮಂಜುನಾಥ ಕಾಮತ್, ಶಾಲಾ ಸಂಚಾಲಕರಾದ ಗೋವಿಂದ ಶೆಣೈ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಕೊಟ್ಟಿಂಜ, ಪ್ರದೀಪ್ ಶೆಟ್ಟಿ ಅಡ್ಯಾರ್, ಇಂಜಿನಿಯರ್ ಸುದೀಪ್ ಶೆಟ್ಟಿ ಅಡ್ಯಾರ್, ಶತಮಾನೊತ್ಸವ ಸಮಿತಿಯ ಕಾರ್ಯದಶಿಗಳಾದ ಪ್ರಭಾಕರ ಆಚಾರ್ಯ,ಹರೀಶ್ ಫರಂಗಿಪೇಟೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಆಶಾ, ಹರೂನ್ ರಶೀದ್, ಶಿಕ್ಷಕ- ರಕ್ಷಕ ಸಮಿತಿಯ ಅಧ್ಯಕ್ಷೆ ಜಯಶ್ರೀ ಶ್ರೀನಿವಾಸ್ ಭಂಡಾರಿ, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

