ಉಡುಪಿ: ಜೇಸಿಐ ಪರ್ಕಳ ಇದರ ವತಿಯಿಂದ ಪಟ್ಯ ಯು.ಎಸ್ ನಾಯಕ್ ಪೌಢಶಾಲೆಯ ಆಶ್ರಯದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಸಮಾರಂಭ ಶಾಲೆಯ ಆವರಣದಲ್ಲಿ ಜು.25 ರಂದು ನಡೆಯಿತು.

ಈ ಸಂದರ್ಭದಲ್ಲಿ ಶಾಲೆಗೆ ಕಸ ಸಂಗ್ರಹಿಸಲು ತೊಟ್ಟಿ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ಪ್ರಭು, ಗ್ರಾ.ಪಂ ಸದಸ್ಯ ಗುರುನಂದ ನಾಯಕ್, ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಪರ್ಕಳ ಜೇಸಿ ಅದ್ಯಕ್ಷ ದೇವೇಂದ್ರ ನಾಯಕ್, ಯುವ ಜೇಸಿ ವಿಭಾಗದ ಸುಪ್ರಿಯಾ ಶೆಟ್ಟಿ, ಇಂದಿರಾ ಶೆಟ್ಟಿ, ಸ್ವರಾಜ್ ಮರಿಯಪ್ಪ ಉಪಸ್ಥತರಿದ್ದರು.
