ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ ಆಗಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಆನೆಗೊಂದಿ ಮಠದಲ್ಲಿ ಯಾರಿಗೆ ತಿಳಿಯದಂತೆ ಭಾನುವಾರ ಹಾಗೂ ಸೋಮವಾರ ಎರಡು ಯಾಗವನ್ನು ಮಾಡಿಸಿದ್ದಾರೆ.

ಅತ್ಯಂತ ಪ್ರಭಾವಕಾರಿ ಚಂದ್ರಗ್ರಹಣದಿಂದ ದೋಷ ಉಂಟಾಗಬಹುದು ಎಂದು ಪೂರ್ವಭಾವಿಯಾಗಿ ಯಾಗ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸುಮಾರು 100 ಮಂದಿ ಪುರೋಹಿತರು ಶತಚಂಡಿಕಾಯಾಗ ಮತ್ತು ಮಹಾರುದ್ರ ಯಾಗವನ್ನು ನೆರವೇರಿಸಿದ್ದಾರೆ.
ಈ ಯಾಗಕ್ಕೆ ಯಡಿಯೂರಪ್ಪ ಹಾಗೂ ಅವರ ಮ್ಕಕಳಾದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಕೂಡ ಯಾಗದಲ್ಲಿ ಪಾಲ್ಗೊಂಡಿದ್ದಾರೆ. ಈ ಯಾಗದ ಕುರಿತು ಉಡುಪಿ ಜಿಲ್ಲೆಯ ಬಿಜೆಪಿ ನಾಯಕರಿಗೂ ಮಾಹಿತಿ ಇರಲಿಲ್ಲ ಎನ್ನಲಾಗುತ್ತಿದೆ.
