ಶಿರ್ವ: ತುಳುನಾಡು ದೈವಾರಾಧನೆ ಹಾಗೂ ನಾಗಾರಾಧನೆಗೆ ಹೆಸರುವಾಸಿ ಅಲ್ಲದೇ ಇಲ್ಲಿ ಅನೇಕ ಪವಾಡಗಳು ನಡೆಯುತ್ತಿರುವುದು ಸತ್ಯಸಂಗತಿ. ಅದನ್ನು ಮತ್ತೆ ಸಾಬಿತು ಪಡಿಸಲು ಕಡಿಪಾಡಿಯ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಇತ್ತೀಚೆಗೆ ಪವಾಡವೊಂದು ನಡೆದು, ಈ ದೃಶ್ಯಗಳು ಆಸ್ತಿಕರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಅದರಂತೆಯೇ ಇದೇ ಊರಿನಲ್ಲಿ ಕೋಟೆ ಗ್ರಾಮದ ಕಿನ್ನಿಗುಡ್ಡೆ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ದಿನನಿತ್ಯ ವಿಶೇಷ ಪವಾಡ ನಡೆಯಿತ್ತಿದೆ.

ಕಿನ್ನಿಗುಡ್ಡೆಯ ಬಬ್ಬುಸ್ವಾಮಿದೇವಸ್ಥಾನದ ನಾಗಬನದಲ್ಲಿ ಮಡಿಕೆನಾಗ ಸನ್ನಿಧಿಯಲ್ಲಿ ನಾಗರ ಹಾವೊಂದು ಪ್ರತಿನಿತ್ಯ ಮಣ್ಣಿನ ಮಡಿಕೆಯಲ್ಲಿ ಇರಿಸುವಂತಹ ಶುದ್ಧ ನೀರನ್ನು ಕುಡಿದು ಹೋಗುತ್ತಿದೆ. ಈ ದೇವಸ್ಥಾನದ ಮುಖ್ಯಸ್ಥ ದೇವರಾಜ್ ಕೋಟೆ ಅವರು ಪೂಜೆ ಮಾಡುತ್ತಾರೆ. ಇವರು ಈ ಮಡಕೆಯನ್ನು ದಿನನಿತ್ಯ ಶುಚಿಗೊಳಿಸಿ ಸ್ಥಳೀಯ ವೆಂಕಟರಮಣ ದೇವರ ತೀರ್ಥ ಹಾಗೂ ತುಳಸಿದಳವನ್ನು ಹಾಕಿ ನೀರು ಶೇಖರಿಸಿಡಲಾಗುತ್ತದೆ. ಬೆಳಗ್ಗಿನ ಪೂಜೆ ಮುಗಿದು ಜನರು ಕಡಿಮೆಯಾಗುವುದನ್ನು ಗಮನಿಸಿ ಈ ನಾಗರಹಾವು ಅಲ್ಲಿಗೆ ಬಂದು ಹೋಗುತ್ತದೆ. ಮೂರ್ನಾಲ್ಕು ಬಾರಿ ಈ ನಾಗರಹಾವು ಇಲ್ಲಿ ಗೋಚರವಾಗಿತ್ತು. ಈ ಮಡಕೆಯನ್ನು ಹಳೆಕಾಲದಲ್ಲಿ ಪ್ರತಿಷ್ಠಾಪಿಸಲಾದ ನಾಗಶಿಲಾ ಮೂರ್ತಿಯ ಮುಂಬಾಗದಲ್ಲಿ ಇರಿಸಲಾಗಿದೆ.
ಈಗಾಗಲೇ ನಾಗರಹಾವು ದೇವಸ್ಥಾನದ ಆವರಣದಲ್ಲಿ ಕಾಣಿಸಿಕೊಂಡಿದ್ದು, ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದೆ. ಈ ನಾಗರಹಾವು ಹಿಂದಿನಿಂದಲೂ ಇಲ್ಲಿ ಬರುತ್ತಿದೆ ಎಂದು ಅಲ್ಲಿನ ಹಿರಿಯರು ಅಭಿಪ್ರಾಯ ಪಟ್ಟಿದಾರೆ. ಈ ದೇವಸ್ಥಾನದ ಬಬ್ಬುಸ್ವಾಮಿ ಹಾಗೂ ನಾಗ ಸಹಿತ ಪರಿವಾರ ದೈವಗಳಿಗೆ ಪೂಜೆ ನಡೆಸಲಾಗುತ್ತದೆ.ಜು 27ರಂದು ನಡೆಯುವ ಚಂದ್ರ ಗ್ರಹಣದಂದು ಇಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ದೇವರಾಜ್ ಕೋಟೆ ತಿಳಿಸಿದ್ದಾರೆ.
ಪ್ರತಿದಿನ ಈ ನಾಗರಹಾವು ಬಂದು ಮಡಿಕೆ ನೀರನ್ನು ಕುಡಿಯುವುದು ವಿಶಿಷ್ಟವಾಗಿದೆ. ಅಲ್ಲದೇ ಜನರನ್ನು ಕೂತುಹಲ ಮೂಡಿಸಿದೆ.
