ಉಡುಪಿ: ಜೇಸಿಐ ವಲಯ 15 ರಲ್ಲಿ ಉಡುಪಿ, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿ ಸರಣಿ ತರಬೇತಿಗಳ ಮೂಲಕ ಸದಸ್ಯರಿಗೆ ವಿವಿಧ ವಿಷಯಗಳ ಕುರಿತು ತರಬೇತಿಗಳನ್ನು ನೀಡುವಲ್ಲಿ ಸಹಕರಿಸಿದ ವಿನೂತನ ಜೇಸಿ ಐಡಿ ಯಾತ್ರೆ-2018 ಕಾರ್ಯಕ್ರಮದ ಸಮಾರೋಪ ಸಮಾರಂಭ ಜುಲ್ಯೆ.20 ರಂದು ಉಡುಪಿ ದುರ್ಗಾ ಇಂಟರ್ ನ್ಯಾಷನಲ್ ನಲ್ಲಿ ನಡೆಯಿತು.

ID yatra (2)
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜೇಸಿಐ ಫೌಂಡೇಶನ್ ನಿರ್ದೇಶಕ ವೈ ಸುಕುಮಾರ್ ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನದ ಸಂಸ್ಥೆಯಾಗಿದ್ದು, ಈ ಮೂಲಕ ಸಮಾಜದಲ್ಲಿ ಹೊಸ ಪರಿವರ್ತನೆ ತರಲು ಸಹಕರಿಸುತ್ತಿದೆ. ಈ ಐಡಿ ಯಾತ್ರೆಯು ನಮ್ಮ ವಲಯದ ಮೈಲಿಕಲ್ಲಾಗಿದೆ ಎಂದರು.
ವಲಯಾದ್ಯಕ್ಷ ರಾಕೇಶ್ ಕುಂಜೂರು ಈ ವರ್ಷದಲ್ಲಿ ತರಬೇತಿ ವಿಭಾಗದಲ್ಲಿ ಅನೇಕ ರೀತಿಯ ಕಾರ್ಯಕ್ರಮ ನಡೆದಿದೆ. ಐಡಿ ಯಾತ್ರೆಯನ್ನು ನೋಡಿ ಬೇರೆ ರಾಜ್ಯದಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಸ್ಥಾವಿರುವುದು ಇದು ಐಡಿ ಯಾತ್ರೆಯ ಯಶಸ್ಸು ಎಂದರು.

ID yatra (1)
,ಈ ಐಡಿ ಯಾತ್ರೆಯು ವಲಯಾದ್ಯಂತ ಸಂಚರಿಸಿ ಘಟಕಗಳ ಸದಸ್ಯರಿಗೆ ವಿವಿಧ ರೀತಿಯ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಆಯೋಜನೆ ಮಾಡಿದೆ ಎಂದು ನಿಕಟ ಪೂರ್ವ ವಲಯಾದ್ಯಕ್ಷ ಸಂತೋಷ್ ಜಿ ಹೇಳಿದರು.
ತರಬೇತುದಾರರಾಗಿ ಸತೀಶ್ ಭಟ್ ಬಿಳಿನೆಲೆ ಮತ್ತು ರೂಪಶ್ರೀ ಇಂದ್ರಾಳಿ ಭಾಗವಹಿಸಿದ್ದರು. ವೇದಿಕೆಯಲ್ಲಿ,ಐಡಿ ಯಾತ್ರೆ ಸಂಯೋಜಕಿ ಸಂದ್ಯಾ ರಾಜೇಶ್,ವಲಯ ಉಪಾದ್ಯಕ್ಷರಾದ ರಾಘವೇಂದ್ರ ಪ್ರಭು ಕರ್ವಾಲು, ಪಶುಪತಿ ಶರ್ಮಾ,ನಿರ್ದೇಶಕ ಧೀರೇಂದ್ರ ಜೈನ್,ವಲಯಾಧಿಕಾರಿಗಳು ಘಟಕಾದ್ಯಕ್ಷರಾದ ಮಣಿಪಾಲ್ ಹಿಲ್‍ಸಿಟಿ ಶ್ರೀನಿವಾಸ ಆಚಾರ್ಯ,ಬ್ರಹ್ಹಾವರ ಸೇವಾಮೆ ಅದ್ಯಕ್ಷ ಜೋಯಲ್ ಅತಿಥ್ಯವನ್ನು ವಹಿಸಿದ ಪರ್ಕಳದ ಅದ್ಯಕ್ಷ ದೇವೇಂದ್ರ ನಾಯಕ್ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಸಹಕರಿಸಿದ ಕಲ್ಯಾಣಪುರು ಕೋಸ್ಮೋಸಿಟಿ ಸದಸ್ಯರನ್ನು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *