ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‍ನಲ್ಲಿ ಹೆಸರುವಾಸಿಯಾಘಿದ್ದು ಎಲ್ಲರಿಗೂ ತಿಳಿದಿರುವ ಸಮಗತಿ. ಅಂತೆಯೇ ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾರನ್ನು ಮದುಯಾಗಿ ಮತ್ತಷ್ಟು ಸುದ್ದಿಗೆ ಪಾತ್ರರಾಗಿದ್ದಾರೆ. ಈ ಎರಡು ವಿಷಯವನ್ನು ಹೊರತು ಪಡಿಸಿ ಕೊಹ್ಲಿ ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಿಂದ ಮಾಡುವ ಜಾಹಿರಾತಿನ ಪೋಸ್ಟ್ ಅತೀ ದುಬಾರಿ ಜಾಹಿರಾತುಗಳಾಗಿವೆ.

virat-kohli
ವಿರಾಟ್ ಕೊಹ್ಲಿ ಒಂದು ಜಾಹಿರಾತನ್ನು ಪೋಸ್ಟ್ ಮಾಡುವುದರ ಮೂಲಕ ಸುಮಾರು 84.45 ಲಕ್ಷ ರೂ. ಗಳಿಸುತ್ತಾರೆ. ಹೀಗಾಗಿ ಅವರು ಜನತ್ತಿನ ಶ್ರೀಮಂತರ ಸಾಲಿನಲ್ಲಿ 17ನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಫುಟ್ಬಾಲ್ ಕ್ರೀಡಾ ಪಟುಗಳ ಪೈಕಿ ಕ್ರಿಸ್ಟಿಯಾನೋ ರೊನಾಲ್ಡೋ ಒಂದು ಜಾಹಿರಾತಿಗೆ 5 ಕೋಟಿ.ರೂ ಪಡೆಯುವುದರ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.
ಕೊಹ್ಲಿಯ ಇನ್‍ಸ್ಟಾಗ್ರಾಂ ಖಾತೆಯಲ್ಲಿ 2.32 ಕೋಟಿ ಫೋಲವರ್ಸ್ ಇದ್ದಾರೆ. ಭಾರತೀಯರಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ಜಾಹಿರಾತಿನ ಮೂಲಕ ದುಬಾರಿ ಮೊತ್ತ ಪಡೆಯುವಲ್ಲಿ ಇವರು ಒಬ್ಬರೇ ಸ್ಥಾನ ಪಡೆದಿರುವುದು ಗಮನಾರ್ಹ.

By suddi9

Leave a Reply

Your email address will not be published. Required fields are marked *