ಕಾಸರಗೋಡು: ಇಂದಿನ   ಆಧುನಿಕ ಜೀವನ ಶೈಲಿಯಲ್ಲಿ ಹಳೆಯ ಕೃಷಿ ಪದ್ದತಿಗಳನ್ನು ಯುವ ಪೀಳಿಗೆಗಳು ಮರೆಯುವಂತಾಗಿದೆ. ಆಧುನಿಕತೆಗೆ ತಕ್ಕಂತೆ ಕೃಷಿ ಪದ್ಧತಿಯೂ ಬದಲಾಗುತಿದೆ. ಗ್ರಾಮೀಣ ಭಾಗದ ಕೃಷಿಕರು ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿರುವುದರಿಂದ ಭತ್ತದ ಬೇಸಾಯ ಕಡಿಮೆಯಾಗುತ್ತಿದೆ. ಹಾಗು ಹೊಸ ತಲೆಮಾರು ಕೃಷಿಯಿಂದ ದೂರ ಸರಿಯುತ್ತಿದೆ. ಕೃಷಿಯನ್ನು ಕ್ರಷಿಕರನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಉಂಟಾಗಬೇಕಿದೆ ಎಂದು ಸುರೇಶ್ ಭಟ್   ಅಭಿಪ್ರಾಯಪಟ್ಟರು.IMG_20180724_182923

 

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬಂತೆ ಮಕ್ಕಳಿಗೆ ಎಳವೆಯಲ್ಲಿಯೇ ಕೃಷಿಯ ಬಗ್ಗೆ ಅರಿವು ಹಾಗು ಆಸಕ್ತಿ ಮೂಡಿಸಲು ಪ್ರತಿಯೊಬ್ಬರು ಶ್ರಮಿಸಬೇಕು.ಕೃಷಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎ.ಯು.ಪಿ ಶಾಲೆ ಪಳ್ಳತ್ತಡ್ಕದ ಮಕ್ಕಳಿಗೆ ಕಲಿಕೆಯ ಭಾಗವಾಗಿ ಸಮೀಪದ ಸುರೇಶ್ ಭಟ್ ಅವರ ಪಳ್ಳತಡ್ಕ ವಿದ್ಯಾರ್ಥಿಗಳಿಂದ ಬೇಸಾಯದ ವೀಕ್ಷಣೆಣೆಗೆ ಅವಕಾಶ ಕಲ್ಪಿಸಿ ಬೇಸಾಯದ ಕುರಿತು  ಮ್ಕಳಿಗೆ ತಿಳಿಯಪಡಿಸಿದರು.IMG_20180724_183249

ಪ್ರಕೃತಿ ರಮಣೀಯವಾದ ಪರಿಸರದಲ್ಲಿ ಕಾಲ್ನಡೆಯಾಗಿ ಹೋಗಿ ಗದ್ದೆಯನ್ನು ತಲುಪಿದಾಗ ಮಕ್ಕಲಿಗೆ ಸಂತಸವುಂಟಾಯಿತು. ಅಲ್ಲಿ ನೇಜಿ ನೆಡುವ ಕೆಲಸಗಳನ್ನು ಸೂಕ್ಶ್ಮವಾಗಿ ನಿರೀಕ್ಷಿಸಿ ಬೇಸಾಯದ ಒಂದು ಹಂತವನ್ನು ತಿಳಿದುಕೊಂಡರು. ಭತದ ಬೇಸಾಯದ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡಿದರು. ನಿರೀಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಈಗಿನ ಕಲಿಕೆಗೆ ಹೊಂದಿಕೊಂಡು ಆಯೋಜಿಸಿದ ಈ ಬಯಲುಪ್ರವಾಸದಿಂದ ಮಕ್ಕಳು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಂಡರು. ಪಂಚೇಂದ್ರಿಯಗಳ ಮೂಲಕ ಅನುಭವವನ್ನು ಗಳಿಸಿದ ಮಕ್ಕಳ ಮನದಲ್ಲಿ ಕಲಿತ ಪಾಠವು ಅಚ್ಚಳಿಯದೆ ಉಳಿಯಬಹುದು ಎಂಬುವುದರಲ್ಲಿ ಸಂಶಯವಿಲ್ಲ.

By suddi9

Leave a Reply

Your email address will not be published. Required fields are marked *