ಮುಲ್ಕಿ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮೇಳದ ಕಲಾವಿದರರನ್ನು ಈ ಹಿಂದೆ ಮೇಳದಿಂದ ಕೈಬಿಟ್ಟಿದ್ದು,ಇದೀಗ ಕಟೀಲು ಮೇಳದ ಕಲಾವಿದ ಮಹಾಬಲ ರೈ ಯುಟರ್ನ್ ತೆಗೆಂದುಕೊಂಡು ಕಟೀಲು ಮೇಳದಲ್ಲಿ ತನ್ನನ್ನು ಸೇರಿಸಿಕೊಳ್ಳಲು ವಿನಂತಿಸಿದ್ದಾರೆ. ಮೇಳದಲ್ಲಿ ಕಲಾವಿದ ಹಾಗೂ ಭಾಗವತರ ಬದಲಾವಣೆ ಕುರಿತು ಯಾವುದೇ ವಿಷಯ ತನಗೆ ತಿಳಿದಿಲ್ಲ ಎಂದು ಕಲಾವಿದ ಮಹಾಬಲ ರೈ ಹೇಳಿದ್ದಾರೆ. ಅವರು ಕಟೀಲು ಖಾಸಾಗಿ ಹೋಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ನನ್ನ ಸ್ಪಷ್ಟ ನಿಲುವನ್ನು ವ್ಯಕ್ತ ಪಡಿಸಿದರು.
ಕಟೀಲು ಮೇಳದಲ್ಲಿ 2017-18ರ ತಿರುಗಾಟದಲ್ಲಿ ಮೇಳದ ಪ್ರಧಾನ ಭಾಗವತರನ್ನು 5 ನೇ ಮೇಳದಿಂದ 4 ನೇ ಮೇಳಕ್ಕೆ ಬದಲಾವಣೆ ಮಾಡುವುದಕ್ಕೆ ಇತರ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದರು. ಇದರ ಸಲುವಾಗಿ ಕಟೀಲಿನ 5 ಮೇಳದ ಕಲಾವಿದರು ಸಭೆ ಸೇರುವ ಬಗ್ಗೆ ಕಲಾವಿದರಾದ ಮೋಹನ್ ಕುಮಾರ್ ಅಮ್ಮುಂಜೆ ನನಗೆ ಸಭೆಗೆ ಹಾಜರಾಗುವಂತೆ ಹೇಳಿದ್ದರು.
ಮೇಳದ ಯಜಮಾನರಿಗೆ ಈ ಕುರಿತು ಮನವಿ ಸಲ್ಲಿಸುವ ಕಾರ್ಯಕ್ರಮವಿದೆ ಎಂದು ನನ್ನಲ್ಲಿ ಹೇಳಿದ್ದರು. ಅದರಂತೆ ನಾನುಸಭೆಗೆ ತೆರಳಿದಾಗ 5ನೇ ಮೇಳದ ಭಾಗವತರನ್ನು ಬದಲಾವಣೆ ಮಾಡುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರಕ್ಕೆ ಸಹಿ ಹಾಕಲು ಹೇಳಿದ್ದರು. ವಿದ್ಯಾಭ್ಯಾಸ ಇಲ್ಲದ ನಾನು ಅವರು ಅದರಲ್ಲಿ ಬರೆದಿರುವುದನ್ನು ಓದದೆ ಸಹಿ ಹಾಕಿದ್ದರು. ಅಷ್ಟೇ ಅಲ್ಲದೆ ಸಭೆಗೆ ಹಾಜರಾಗದವರ ಬಗ್ಗೆಯೂ ಅವರ ಸಹಿ ಹಾಕುವಂತೆ ಹೇಳಿದಾಗ ನನ್ನಿಂದ ಸಾಧ್ಯವಿಲ್ಲ ಎಂದಿದ್ದೇನೆ.
ಸಹಿ ಹಾಕುವುದರಿಂದ ಏನು ತೊಂದರೆ ಇಲ್ಲ ಎಂದು ಹೇಳಿದ್ದರು. ಈ ಸಭೆಯ ನಂತರ ಮೇಳದ ಕಲಾವಿದರೆಲ್ಲರೂ ಶಾಂತಿ ಭವನದ ಆಚಾರ್ಯರ ಮನೆಗೆ ತೆರಳಿದ್ದು, ಅಲ್ಲಿ ರಾಜೀನಾಮೆಯ ಮನವಿ ಪತ್ರ ಕೊಡಲಾಯಿತು. ಇದು ನಿಮ್ಮ ಕೊನೆಯ ನಿರ್ಧಾರವೇ? ಎಂದು ಪ್ರಶ್ನಿಸಿದಾಗ ಸಂಶಯಾಗೊಂಡ ಮಹಾಬಲರು ಸಹಿ ತೆಗೆದುಕೊಂಡವರ ಬಳಿ ವಿಷಯ ಕೇಳಿದಾಗ ಮೇಳದ ಕಲಾವಿದರು ರಾಜೀನಾಮೆ ನೀಡುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಬಳಿಕ ಮೇಳದ 7 ಕಲಾವಿದರು ಮೇಳದಿಂದ ಹೊರಕ್ಕೆ ಎಂಬ ವಿಷಯ ತಿಳಿದಾಗ ಭಯಗೊಂಡ ನಾನು ವಿರೋಧ ವ್ಯಕ್ತಪಡಿಸಿದಾಗ ಇನ್ನು ಸ್ವಲ್ಪ ದಿನಗಳಲ್ಲಿ ಎಲ್ಲಾ ಸರಿಯಾಗುತ್ತದೆ ಎಂದು ಹೇಳಿದರು.
ನಂತರ ಆದರೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಸುಮಾರು 3 ಗಂಟೆಗಳ ಬಳಿಕ ಮಾಧವ ಕೊಳ ತ್ತಮಜಲು ಕರೆ ಮಾಡಿ ಬಿರುವೆರ್ ಕುಡ್ಲ ಸಂಘಟನೆ ಸಭೆ ಇದೆ ಎಂದು ಆಹ್ವಾನಿಸಿದರು. ಆದರೆ ಇವರು ಹೋಗುವ ಮನಸ್ಸು ಮಾಡಲಿಲ್ಲ. ಇದರ ಬಳಿಕ ಮೇಳವನ್ನು ದತ್ತಿ ಇಲಾಖೆ ಮಾಡಿ ಯಜಮಾನನನ್ನು ಬದಲಾಯಿಸುವುದಕ್ಕೆ ಸಹಿ ಹಾಕಬೇಕು ಎಂದರೂ ಅವರು ಸಹಿ ಹಾಕಲು ಮುಂದಾಗಲಿಲ್ಲ ಎಂದು ಹೇಳಿದರು.
ಸಭೆಗೆ ಹೋಗದ ಕಾರಣದಿಂದ ಮಳೆಗಾಲದ ಯಕ್ಷಗಾನ ಕಾರ್ಯಕ್ರಮಕ್ಕೆ ಕರೆಯಲಿಲ್ಲ. ಅಲ್ಲದೆ ವಾಟ್ಸಪ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಾಧವ ಕೊಳತ್ತಮಜಲು ಅಪಪ್ರಚಾರ ಮಾಡಿದ್ದಾರೆ. ಯಾವುದೇ ಪ್ರತಿಕಿಯೆ ಬಾರದೇ ಇದ್ದಾಗ ಅವರ ಅಳಿಯ ದೇತ್ಯಡ್ಕ ಮೇಳಕ್ಕೆ ಸೇರಿಸಿದ್ದಾರೆ. ಇವರಿಗೆ ಜೀವನ ಸಾಗಿಸಲು ಇದೊಂದೆ ದಾರಿಯಾಗಿದೆ. ಅದಕ್ಕಾಗಿ ಅವರು ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಕಟೀಲು ಮೇಳಕ್ಕಾಗಿ ಮೀಸಲಿಡುತ್ತೇನೆ ಅಲ್ಲದೇ ಅಲ್ಲಿ ಸೇವೆ ಸಲ್ಲಿಸುವುದು ಖುಷಿ ಇದೆ ಎಂದಿದ್ದಾರೆ. ವಿದ್ಯಾಭ್ಯಾಸ ತಿಳಿದಿಲ್ಲ ಎಂದು ಸಹಿ ಹಾಕುವಲ್ಲಿ ಬಲಿಪಶು ಮಾಡಲಾಗಿದೆ ಎಂದು ಕಟೀಲು ಮೇಳದ ಕಲಾವಿದ ನಗ್ರಿ ಮಹಾಬಲ ರೈ ತಿಳಿಸಿದ್ದಾರೆ.ಈ ಸಂದರ್ಭ ನವೀನ್ ರೈ, ಸುಗುಣ, ಶರ್ಮಿಳಾ ಉಪಸ್ಥಿತರಿದ್ದರು.

