ವಿಟ್ಲ : ಸಂತ ರೀಟಾ ಅ.ಹಿ.ಪ್ರಾ.ಶಾಲೆಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಸಮಾವೇಶವು ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜೊತೆ ಕಾರ್ಯದರ್ಶಿಗಳಾದ ವಂ|| ಎರಿಕ್ ಕ್ರಾಸ್ತ ಮಾತನಾಡಿ ಮಕ್ಕಳ ಶಿಕ್ಷಣದ ಪ್ರಗತಿಗೆ ಶಿಕ್ಷಕರ ಜೊತೆಗೆ ಹೆತ್ತವರ ಪಾತ್ರವೂ ಬಹುಮುಖ್ಯ ಮತ್ತು ಶಾಲೆಯ ಪ್ರಗತಿಗೆ ಸಹಕರಿಸಿದ ಹೆತ್ತವರಿಗೆ ಕೃತಜ್ಞತೆಗಳನ್ನು ತಿಳಿಸಿ ಮುಂದೆಯು ಪ್ರೋತ್ಸಾಹಿಸುವಂತೆ ಮತ್ತು ಶಾಲೆಯ ಚಟುವಟಿಕೆ ಮತ್ತು ನಿಯಮಗಳನ್ನು ತಿಳಿಸಿದರು.

parents-teacher meeting
ಅತಿಥಿಗಳಾಗಿದ್ದ ಸ್ಟಾನಿಸ್ಲವ್ ರೆಬೆಲ್ಲೊರವರು ಮಾತನಾಡಿ, ಮಕ್ಕಳಲ್ಲಿ ಪ್ರೀತಿ, ಸೌಹಾರ್ದತೆ, ಗೌರವ ನೀಡುವುದನ್ನು ಓದಿನೊಂದಿಗೆ ಶಿಕ್ಷಕರಷ್ಟೇ ಹೆತ್ತವರು ಕಾಳಜಿ ವಹಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿ ಉತ್ತಮ ನಾಗರೀಕನಾಗಲು ಸಾಧ್ಯ ಹೇಳಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಚಾರ್ಲಿ ಸಿಕ್ವೇರಾ, ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕರಾದ ವಂ|| ಲ್ಯಾನ್ಸಿ ಸಲ್ಡಾನ ಮತ್ತು ನಿವೃತ್ತ ಮುಖ್ಯಶಿಕ್ಷಕಿ ಸಿಸ್ಟರ್ ಮೇರಿ ಪೌಲಿನ್ ಲಸ್ರಾದೊ, ಶಾಲಾ ಸಮಿತಿಯ ಗೌರವ ಸಲಹೆಗಾರರಾದ ಸುದರ್ಶನ ಪಡಿಯಾರ್, ಸದಸ್ಯರಾದ ಕ್ಲೋಡಿಯಾ ಲೋಬೊ, ಉಮೇಶ್.ಕೆ, ಮಹಮ್ಮದ್ ಶಾಫಿ, ಅನಿತಾ ಲೋಬೊ, ಹೆನ್ರಿ ಡಿ’ಸೋಜ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಸಿಸ್ಟರ್ ಜೊನೆಟ್ ಡಿ’ಸೋಜ ಶೈಕ್ಷಣಿಕ ವರದಿ ಮಂಡಿಸಿದರು. ಸಹಶಿಕ್ಷಕ ಸಿ.ಜಯರಾಮ ಶಾಸ್ತ್ರಿ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಣೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಸಹಶಿಕ್ಷಕಿಯರಾದ ಶ್ರೀಮತಿ ಬೆನಡಿಕ್ಟಾ ಡಿ’ಸೋಜ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಲೀನಾ ವೇಗಸ್ ವಂದಿಸಿದರು.

By suddi9

Leave a Reply

Your email address will not be published. Required fields are marked *