ಬಂಟ್ವಾಳ: ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಮ್ಮ ಕ್ಷೇತ್ರ ಪ್ರವಾಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ಬಿ.ಸಿ ರೋಡಿನ ಸಾಮಥ್ರ್ಯ ಸೌಧ ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.
ನಂತರ 11.30ಕ್ಕೆ ಸರಕಾರಿ ಶಾಲೆಗೆ ವೀರಾಂಜನೇಯ ಫ್ರೆಂಡ್ಸ್ ದಂಡಿಬೆಟ್ಟು ಪಾದೆಕೋಡಿ ಇವರ ವತಿಯಿಂದ ಭೋಜನ ಸಾಮಾಗ್ರಿವಿತರಣ ಕಾರ್ಯಕ್ರಮ ನಡೆಯಲಿದೆ. ಈ ಎರಡು ಕಾರ್ಯಕ್ರಮದ ನಂತರ ಅವರು ಮಧ್ಯಾಹ್ನ 3ಗಂಟೆಗೆ ಬಿ.ಸಿ ರೋಡಿನಲ್ಲಿರುವ ಸಾಮಥ್ರ್ಯ ಸೌಧ ಶಾಸಕರ ಕಚೇರಿಗೆ ತೆರಳಲಿದ್ದಾರೆ.

