ವಿಟ್ಲ: ರಾಮ್ಕೊ ಸಿಮೆಂಟ್ ಕಂಪನಿ ವತಿಯಿಂದ ವಿಟ್ಲದ ಜೆ ಎಲ್ ಸಭಾ ಭವನದಲ್ಲಿ ಮೇಸ್ತ್ರಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಶೆಲ್ಟರ್ ಎಸೋಸಿಯೇಟ್ಸ್‍ನ ಸಂತೋಶ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ವಿಟ್ಲ ಸುತ್ತುಮುತ್ತಲಿನ ಎಲ್ಲಾ ಮೇಸ್ತ್ರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೇಸ್ತ್ರಿಗಳಿಗೆ ಸರಳ ಪ್ರಶ್ನೋತ್ತರಗಳಿಗೆ ಬಹುಮಾನಗಳನ್ನು ನೀಡಲಾಯಿತು. ಮಂಗಳೂರು ಓಶನ್ ಕಿಡ್ಸ್ ತಂಡದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಬಾಲಾಜಿ ಟ್ರೇಡಿಂಗ್ ಕಂಪನಿಯ ರಾಧಾಕೃಷ್ಣ ಪೈ, ರಾಮ್ಕೊ ಸಿಮೆಂಟ್ ಕಂಪನಿಯ ಏರಿಯಾ ಮಾರಾಟ ಮುಖ್ಯಸ್ಥ ಸಂಜೀವ್, ಮ್ಯಾನೇಜರ್ ಮಹಮ್ಮದ್ ಮತ್ತು ತಾಂತ್ರಿಕ ಮುಖ್ಯಸ್ಥ ಸೂರಜ್ ಉಪಸ್ಥಿತರಿದ್ದರು.
