ಬಡಗಬೆಳ್ಳೂರು : ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಹಿಂದೂ ರುದ್ರಭೂಮಿ ಉದ್ಘಾಟನೆ, ಸ್ವಚ್ಚತಾ ಘಟಕ ಸ್ಥಾಪನೆ, ಕುಡಿಯುವ ನೀರು, ರಸ್ತೆ ಹಾಗೂ ಮದ್ಯ ಮಾರಾಟ ವಿಷಯದಲ್ಲಿ ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗರೆದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾಜೇಶ್ ನಾಯ್ಕರಿಗೆ ಮತ ಹಾಕಿದವರಿಗೆ ಕುಡಿಯುವ ನೀರಿನ ಸಂಪರ್ಕದಲ್ಲಿ ತಾರತಮ್ಯ ಮಾಡಿರುವುದೇಕೆ ? ನೀರಿನ ಸಂಪರ್ಕ ನೀಡುವುದಿಲ್ಲವಾದರೆ ಹಿಂಬರಹ ನೀಡಿ. ಪಂಚಾಯತಿನೊಳಗೆ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷವನ್ನು ಎಳೆದು ತಂದು ಫಲಾನುಭವಿಗಳಿಗೆ ಕುಡಿಯುವ ನೀರು ವಂಚಿಸಬೇಡಿ. ಪ್ರಜೆಗಳು ಯಾರಿಗೆ ಬೇಕಿದ್ದರೂ ಮತ ಚಲಾಯಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತ ಶಶಿಕಿರಣ್ ಹೇಳಿದರು.19vp b grama sabe

ಬಹುತೇಕ ಎಲ್ಲ ಗ್ರಾಪಂಗಳಲ್ಲಿ ಸ್ವಚ್ಛತಾ ಮತ್ತು ವಿಶ್ವ ಯೋಗ ದಿನದಂದು ಕಾರ್ಯಕ್ರಮ ನಡೆದಿದ್ದರೂ, ಬಡಗಬೆಳ್ಳೂರು ಗ್ರಾಪಂನಲ್ಲಿ ಯಾಕೆ ಈ ಕಾರ್ಯಕ್ರಮ ನಡೆದಿಲ್ಲ ? ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಘಟಕ ಆರಂಭಿಸಬಹುದಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಗ್ರಾಪಂ ವತಿಯಿಂದ ಸ್ಚಚ್ಛತಾ ಕಾರ್ಯಕ್ರಮಗಳು ನಡೆದಿವೆ ಮತ್ತು ಸ್ವಚ್ಛತಾ ಘಟಕ ಸ್ಥಾಪನೆಗೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವ ಕಳುಹಿಸಿಕೊಟ್ಟಿದ್ದೇವೆ. ಶೀಘ್ರ ಅನುಮತಿ ಸಿಗಲಿದೆ ಎಂದು ಪಿಡಿಒ ಹರೀಶ್ ತಿಳಿಸಿದರು.19vp ba gra sabe 1

ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ವಿಷಯದಲ್ಲಿ ಗಂಭೀರ ಸವಾಲೆಸೆದ ಕೆಲವರು, “ಬಡಗಬೆಳ್ಳೂರಿನಲ್ಲಿ ಅಕ್ರಮ ಮದ್ಯ ಮಾರಾಟಗಾರರು ಮಾಲು ಸಹಿತ ಬಂಧಿಸಲ್ಪಟ್ಟರೆ, ಬಿ. ಸಿ ರೋಡಿನಲ್ಲಿ ಬಿಡುಗಡೆಯಾಗುತ್ತಾರೆ. ಅಬಕಾರಿ ಇಲಾಖೆಯ ಭ್ರಷ್ಟ ಅಧಿಕಾರಿಗಳಿಂದ ಇದು ಸಾಧ್ಯ” ಎಂದು ಆರೋಪಿಸಿದರು.19vp

ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದಿಲ್ಲ. ದೂರುಗಳು ಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆಯ ನಿರೀಕ್ಷಕಿ ಪುಷ್ಪಾ ಹೇಳಿದರು.

ಪಂಚಾಯತ್ ವ್ಯಾಪ್ತಿಯ ಕೆಲವೆಡೆ ಕಳಪೆ ಕಾಂಕ್ರೀಟ್ ಕಾಮಗಾರಿ ನಡೆದಿವೆ. ಚರಂಡಿಗಳಿಲ್ಲದೆ ರಸ್ತೆ ನೀರು ಮನೆಗಳಿಗೆ ಹರಿಯುತ್ತಿವೆ. ಮೆಸ್ಕಾಂ ಅವ್ಯವಸ್ತೆ ಮುಂತಾದವಿಷಯಗಳನ್ನು ದೇವಪ್ಪ ಪೂಜಾರಿ, ರಮೇಶ್ ಬಟ್ಟಾಜೆ, ಪ್ರಕಾಶ್ ಬೆಳ್ಳೂರು, ಕಮಾಲಾಕ್ಷ ದನುಪೂಜೆ, ಉಸ್ಮಾನ್ ತೆಂಕಬೆಳ್ಳೂರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.19vp ba grama sabe

ಗ್ರಾಪಂ ಅಧ್ಯಕ್ಷೆ ಜಯಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಯಶವಂತಪೊಳಲಿ , ಉಪಾಧ್ಯಕ್ಷ ಯೋಗೀಶ್, ಕೃಷಿ ಇಲಾಖೆ ಅಧಿಕಾರಿ ಕೊರಗಪ್ಪ, ಮೆಸ್ಕಾಂ ಅಧಿಕಾರಿ ಚಿದಾನಂದ, ಆರೋಗ್ಯಾಧಿಕಾರಿ ಪಶು ಸಂಗೋಪನಾಧಿಕಾರಿ ರವಿ ಕುಮಾರ್, ಶಿಕ್ಷಣಾಧಿಕಾರಿ ಉಷಾ ಸುವರ್ಣ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಇಂದಿರಾ, ಇಂಜಿನಿಯರ್ ಕೃಷ್ಣ ಹಾಗೂ ನೋಡೆಲ್ ಅಧಿಕಾರಿ ದಿನೇಶ್ ಇದ್ದರು. ಪಿಡಿಒ ಹರೀಶ್ ಸ್ವಾಗತಿಸಿ ಪಂಚಾಯತ್ ಕಾರ್ಯದರ್ಶಿ ರೀಟಾ ಡಿ’ಸೋಜ ವರದಿ ವಾಚಿಸಿದರು.

By Suddi9

Leave a Reply

Your email address will not be published. Required fields are marked *