ಮೂಡುಬಿದಿರೆ: ತಾಲ್ಲೂಕು ಆರೋಗ್ಯಾಧಿಕಾರಿಯವರ ಸೂಚನೆಯಂತೆ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ವ್ಯಾಪ್ತಿ ಮತ್ತು ಮೂಡುಬಿದಿರೆಯ ಸುತ್ತಮುತ್ತ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗಂಡಾಂತರ ಗರ್ಭಿಣಿಯರಿಗೆ ಗರ್ಭಿಣಿ ಆರೈಕೆ, ಬಾಣಂತಿ ಆರೈಕೆ, ಮತ್ತು ಪೌಷ್ಠಿಕ ಆಹಾರ ಇವುಗಳ ಮಾಹಿತಿ ಶಿಬಿರವನ್ನು ಜುಲೈ 18 ರಂದು ಬೆಳಿಗ್ಗೆ 11.ಗಂಟೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ತಮ್ಮ ವ್ಯಾಪ್ತಿಗೆ ಬರುವ ಗಂಡಾಂತರ ಗರ್ಭಿಣಿಯರನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೂಡುಬಿದಿರೆ ವ್ಯಾಪ್ತಿಯ ಪಟ್ಟಣ ಮತ್ತು ಹಳ್ಳಿಯ ಗಂಡಾಂತರ ಗರ್ಭಿಣಿಯರನ್ನು ಕಿರಿಯ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರು ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಬೇಕೆಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
