ಮೂಡುಬಿದಿರೆ: ಟೂರಿಸ್ಟ್ ಕಾರು ವಾಹನ ಚಾಲಕರಿಗೆ ಜಿಲ್ಲೆಯ ಟೋಲ್‍ಗಳಲ್ಲಿ ವಿನಾಯಿತಿ ಹಾಗೂ ಮೂಡುಬಿದಿರೆಯಲ್ಲಿ ಶಾಶ್ವತವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೂಡುಬಿದಿರೆ ಪುರಸಭೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಮೂಡುಬಿದಿರೆ ಉಮಾನಾಥ ಕೋಟ್ಯಾನ್ ಭರವಸೆ ನೀಡಿದರು.

???????????????????????????????

umanath kotian (2)
ಟೂರಿಸ್ಸ್ ಕಾರು ಹಾಗೂ ಸೀಟರ್ ಟೆಂಪೋ ಚಾಲಕ ಹಾಗೂ ಮಾಲಕ ಸಂಘದವರಿಂದ ಶನಿವಾರ ಸಾಯಂಕಾಲ ಪ್ರವಾಸಿ ಮಂದಿರದಲ್ಲಿ ಸನ್ಮಾನ ಹಾಗೂ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸಂಘದ ಗೌರವಾಧ್ಯಕ್ಷ, ವಕೀಲ ಶರತ್ ಡಿ.ಶೆಟ್ಟಿ ಮಾತನಾಡಿ, ಟೂರಿಸ್ಟ್ ವಾಹನದವರು ಬೇಡಿಕೆ ಕಾನೂನು ರೀತಿಯಲ್ಲಿದೆ. ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ಕುಲಾಲ್, ಸಂಘಟನಾ ಕಾರ್ಯದರ್ಶಿ ಸುದರ್ಶನ್, ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ಜಗದೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಯೋಗೀಶ್ ಪುಚ್ಚೆಮೊಗರು ಟೂರಿಸ್ಟ್ ಅನುಭವಿಸುತ್ತಿರುವ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.

By Suddi9

Leave a Reply

Your email address will not be published. Required fields are marked *