ಬಂಟ್ವಾಳ: ದೇಶದಲ್ಲಿ ಹಲವು ಬಾರಿ ವಿವಿಧ ಕಾರಣಕ್ಕಾಗಿ ಪರಕೀಯರಿಂದ ದಾಳಿಗೆ ಈಡಾಗಿರುವ ಹಿನ್ನೆಲೆಯಲ್ಲಿ ಸ್ವಾಭಿಮಾನದಿಂದ ಮತ್ತೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ಸಾರ್ವಜನಿಕ ಗಣೇಶೋತ್ಸವದಂತಹ ಆಚರಣೆ ಅತ್ಯಗತ್ಯವಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಸಂಘಟಿತರಾಗಿ ಮುನ್ನಡೆಯಬೇಕು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

30btl-Vajradehi

30btl-Vamadapadav
ಬಂಟ್ವಾಳ ತಾಲ್ಲೂಕಿನ ವಾಮದಪದವಿನಲ್ಲಿ ಗುರುವಾರ ಆರಂಭಗೊಂಡ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾಮರ್ಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ನಿಕೇತ್ ರಾಜ್, ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರರು ಇದ್ದಾರೆ.
ತುಮಕೂರು ಯುವ ಭಾರತ್ ಸ್ವಾಭಿಮಾನ್ ಟ್ರಸ್ಟ್ನ ರಾಜ್ಯ ಪ್ರಭಾರಿ ನಿಕೇತ್ರಾಜ್ ಮಾತನಾಡಿ, ಹಬ್ಬಗಳನ್ನು ನಾವು ಅರಿತು ಆಚರಿಸಿದಾಗ ಅದರ ಮಹತ್ವ ಇನ್ನೂ ಹೆಚ್ಚಾಗುತ್ತದೆ. ಪ್ರತಿಯೊಬ್ಬರೂ ಜಾತಿ ಮತ್ತು ಪಕ್ಷಬೇಧ ಮರೆತು ಸಮಸ್ತ ಹಿಂದೂ ಸಮಾಜ ಸಂಘಟಿತರಾಗಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಹಿರಿಯ ಯಕ್ಷಗಾನ ಅರ್ಥದಾರಿ ಕೆ.ವಾಸು ಶೆಟ್ಟಿ ಕುತ್ಲೋಡಿ ಮತ್ತಿತರರು ಶುಭ ಹಾರೈಸಿದರು.
ಸಮಿತಿ ಅಧ್ಯಕ್ಷ ಜಿ.ಕೆ.ಭಟ್ ಕಕ್ಕಿಬೆಟ್ಟು ಸ್ವಾಗತಿಸಿ, ಸಮಿತಿ ಸದಸ್ಯ ನವೀನ್ ಶೆಟ್ಟಿ ಕಕ್ಕಿಬೆಟ್ಟು ವಂದಿಸಿದರು.

By suddi9

Leave a Reply

Your email address will not be published. Required fields are marked *