ಉಡುಪಿ:ಲೋಂಬಾರ್ಡ್ ಮೆಮೋರಿಯಲ್ (ಮಿಷನ್)ಆಸ್ಪತ್ರೆಉಡುಪಿ ಇದರ ವತಿಯಿಂದ ನಗರದ ಸೆ.ಎಸ್.ಐ ಬಾಲಕರ ವಸತಿ ನಿಲಯದಲ್ಲಿ ಜುಲ್ಯೆ.3 ಮಂಗಳವಾರ ಮಕ್ಕಳಿಗೆ ಆರೋಗ್ಯತಪಾಸಣಾ ಶಿಬಿರ ಅದೇರೀತಿ ವಿವಿಧ ದಿನೋಪಯೋಗಿ ವಸ್ತುಗಳ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಡಾ|| ಗಣೇಶ್‍ಕಾಮತ್,ಜಯಂಟ್ಸ್‍ಗ್ರೂಪ್ ಬ್ರಹ್ಮಾವರದ ಮಧುಸೂಧನ್ ಹೇರೂರು,ಸುಂದರ ಪೂಜಾರಿ ಮೂಡುಕುಕಡೆ,ರವಿರಾಜ್ ಹೆಚ್.ಪಿ,ವೈದ್ಯಕೀಯ ಪ್ರತಿನಿಧಿ ಸಂಘದ ಅಣ್ಣಯ್ಯದಾಸ್,ಶ್ರೀನಾಥ್ ಕೋಟ,ಶರತ್,ರೋಹಿ ರತ್ನಾಕರ್ ಮುಂತಾದವರಿದ್ದರು.ರಾಘವೇಂದ್ರ ಪ್ರಭುಕರ್ವಾಲು ನಿರೂಪಿಸಿದರು.
