ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ.ಅ ಸೋಸೈಟಿ ಉಡುಪಿ ಮತ್ತು ಲೋಂಬಾರ್ಡ ಮೆಮೋರಿಯಲ್ ಆಸ್ಪತ್ರೆ(ಮಿಷನ್) ಇದರ ವತಿಯಿಂದ ಜುಲ್ಯೆ.2 ರಂದು ಜಗನ್ನಾಥ ಸಭಾ ಭವನದಲ್ಲಿ ವೈದ್ಯರ ದಿನಾಚರಣೆ ಮತ್ತು ಸಾಧಕ ವೈದ್ಯರಿಗೆ ಸನ್ಮಾನ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕರಾ ಡಾ||ಸುಶೀಲ್ ಜತ್ತನ್ನ,ವೈದ್ಯರು ಯಾವುದೇ ಸಮಯವಿಲ್ಲದೆ ಸಮಾಜದ ಆರೋಗ್ಯವನ್ನು ಕಾಪಾಡುವ ಮಹತ್ವವಾದ ಕಾರ್ಯ ಮಾಡುತ್ತಿದ್ದಾರೆ.ಈ ವೈದ್ಯರ ದಿನಾಚರಣೆಯ ಮೂಲಕ ಅವರ ಸೇವೆಯನ್ನು ಗುರುತಿಸುವ ಕೆಲಸ ನಡೆಯುತ್ತಿರುವುದು ಅಭಿನಂದನೀಯ ಎಂದ ಅವರು,ಸರ್ಕಾರದ ಅನೇಕ ನಿಯಮಗಳ ಹೊರತಾಗಿಯೂ ವೈದ್ಯರ ಸೇವೆ ಅತ್ಯಂತ ಪ್ರಾಮಾಣಿಕವಾಗಿದೆ ಎಂದರು.
ಮುಖ್ಯ ಅತಿಥಿ ಮಣಿಪಾಲ ಕೆ.ಎಂ.ಸಿಯ ಸರ್ಜನ್ ಡಾ|| ರಾಜ್ಗೋಪಾಲ್ ಶೆಣ್ಯೆ ಮಾತನಾಡಿ,ವೈದ್ಯರನ್ನು ದೇವರಿಗೆ ಹೊಲಿಕ ಮಾಡಲಾಗಿದೆ ಇದರಿಂದ ನಾವು ಅವರ ಸೇವೆಯ ಬಗ್ಗೆ ತಿಳಿಯಬಹುದು,ಮಿಷನ್ ಆಸ್ಪತ್ರೆಯು ಕಳೆದ 96 ವರ್ಷಗಳಿಂದ ನೀಡುತ್ತಿರುವ ಆರೋಗ್ಯ ಸೇವೆ ಉಲ್ಲೇಖನೀಯ ಎಂದರು.
ಬಡಗುಬೆಟ್ಟು ಸೋಸೈಟಿಯ ಜಿ.ಎಂ ಜಯಕರ ಶೆಟ್ಟಿ ಇಂದ್ರಾಳಿ,ನಾವು ಈ ರೀತಿಯ ಕಾರ್ಯಕ್ರಮವನ್ನು ಮೊದಲಬಾರಿಗೆ ನಡೆಸುತ್ತಿದ್ದೇವೆ ಈ ಮೂಲಕ ವೈದ್ಯರ ಸೇವೆಗೆ ಕೃತಜ್ಞತೆ ಸಲ್ಲಿಸುವ ಕಾರ್ಯ ಮಾಡುತ್ತಿದ್ದೇವೆ.ಸಮಾಜದಲ್ಲಿ ವೈದ್ಯರ ಬಗ್ಗೆ ಸರಿಯಾದ ಕಲ್ಪನೆ ಇಲ್ಲದೆ ಅವರ ಮಾನಸಿಕ ಸ್ಥಿತಿಯನ್ನು ಕುಂದಿಸುವ ಹಲವಾರು ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿದೆ ಇದು ಸರಿಯಲ್ಲ ಈ ಬಗ್ಗೆ ನಾವೆಲ್ಲರೂ ಒಂದಾಗಿ ವೈದ್ಯರ ಮತ್ತು ದಾದಿಯರ ಸೇವೆಯನ್ನ ಗುರುತಿಸಿ ಅವರಿಗೆ ಅಭಿನಂದಿಸಬೇಕು ಎಂದರು.
ವೇದಿಕೆಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ|| ಗಣೇಶ್ ಕಾಮತ್,ಸಹಾಯಕ ನಿರ್ದೇಶಕಿ ಡಾ|| ದೀಪಾ ರಾವ್ ಮುಂತಾದವರಿದ್ದರು.ಈ ಸಂದರ್ಭದಲ್ಲಿ ವೈದ್ಯರಾದ ಮಾನಸಿಕ ತಜ್ಞರಾದ ಡಾ|| ಪಿ.ವಿ ಭಂಡಾರಿ,ಡಾ|| ವಾಸುದೇವ ಎಸ್,ಬೈಲೂರಿನ ಡಾ||ಭಾಸ್ಕರ ಎಂ ಶೆಟ್ಟಿ,ಕೆ,ಎಂ,ಸಿ ಮಣಿಪಾಲದ ಡಾ||ರಾಜ್ ಗೋಪಾಲ್ ಶೆಣ್ಯೆ,ಡಾ|| ಗಣೇಶ್ ಕಾಮತ್ ಮುಂತಾದವರನ್ನು ಸನ್ಮಾನಿಸಲಾಯಿತು.
ಭಾಗವಹಿಸಿದ ಎಲ್ಲಾ ವೈದ್ಯರಿಗೆ ಗಿಡ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜಿ ಕಾರ್ಯಕರ್ತರಾದ ಮಧುಸೂಧನ್ ಹೇರೂರು,ರಾಘವೇಂದ್ರ ಪ್ರಭು ಕರ್ವಾಲು ರವರನ್ನುಗೌರವಿಸಲಾಯಿತು.
ಆಡಳಿತಾಧಿಕಾರಿ ಡೋನಾಲ್ಡ್ ಅಂಚನ್ ನಿರೂಪಿಸಿದರು.ರೋಹಿ ರತ್ನಾಕರ್ ವಂದಿಸಿದರು.ಈ ಸಂದರ್ಭದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಅಸ್ಪತ್ರೆಯ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಸೊಸೈಟಿಯ ಸಿಬ್ಬಂದಿಗಳು ವೈದ್ಯರ ಕುಟುಂಬದವರು ಭಾಗವಹಿಸಿದ್ದರು.
