ಬಂಟ್ವಾಳ: ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಭಾನುವಾರ ನರಿಕೊಂಬು ಗ್ರಾ.ಪಂಚಾಯಿತಿ ವತಿಯಿಂದ ಗ್ರಾಮಸ್ಥರು ಶ್ರಮದಾನ ನಡೆಸಿದರು. ಮೇಲಂತಸ್ತಿನ ಕಟ್ಟಡಕ್ಕೆ ಕೆಂಪುಕಲ್ಲು ಹಾಗೂ ಹೋಲೋಬ್ಲಾಕ್ಗಳನ್ನು ಸಾಗಿಸಿ ಶ್ರಮ ಸೇವೆ ನೀಡಿದರು. ದುರ್ಗಾ ಫ್ರೆಂಡ್ಸ್ ಕ್ಲಬ್ನ ಸದಸ್ಯರು ಸಾಥ್ ನೀಡಿದರು.
ಈ ಸಂದರ್ಭ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು, ದಡ್ಡಲಕಾಡು ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಪುರೂಷೋತ್ತಮ ಅಂಚನ್, ಪೂವಪ್ಪ ಮೆಂಡನ್, ವಿನೋದ್ ಕರೆಂಕಿ ಮತ್ತಿತರರು ಹಾಜರಿದ್ದರು.
