ಬಂಟ್ವಾಳ: ಅಧಿಕಾರಕ್ಕಾಗಿ ರಾಜಕೀಯ ಮಾಡದೇ ದೇಶಕ್ಕಾಗಿ ಕೆಲಸ ಮಾಡುವವರಿಂದ ದೇಶದ ಉಳಿವು ಸಾಧ್ಯ. ನಮ್ಮ ಮತ್ತು ದೇಶದ ಅಸ್ತಿತ್ವಕ್ಕಾಗಿ ದೇಶಪ್ರೇಮಿಗಳಿಗೆ ಅಧಿಕಾರ ನೀಡಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.ಬಂಟ್ವಾಳ ತಾಲೂಕಿನ ರಾಯಿ ಬಿಜೆಪಿ ವಲಯ ಸಮಿತಿ ಮತ್ತು ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ವತಿಯಿಂದ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ರಾತ್ರಿ ಶಾಸಕ ರಾಜೇಶ್ ನಾೈಕ್ ಅವರಿಗೆ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಪರಸ್ಪರ ಕಚ್ಚಾಡುತ್ತಿದ್ದ ಜನತಾದಳ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಮಾಡಿಕೊಂಡ ಮೈತ್ರಿ ಬಹುಕಾಲ ಬಾಳುವುದಿಲ್ಲ. ತಮ್ಮ ಹಗರಣಗಳನ್ನು ಮುಚ್ಚಿಡಲು ಒಂದಾಗಿ ಬಿಜೆಪಿಗೆ ಅ„ಕಾರ ದೊರೆಯದಂತೆ ಮಾಡಿದ್ದಾರೆ. ಇದು ಹೆಚ್ಚು ಕಾಲ ನಿಲ್ಲುವುದಿಲ್ಲ ಎಂದು ಹೇಳಿದರು.
ಸಮ್ಮಾನಕ್ಕೆ ಉತ್ತರಿಸಿದ ಶಾಸಕ ರಾಜೇಶ್ ನಾೈಕ್ ಅವರು, ಹಿಂದುತ್ವದ ಆಧಾರದಲ್ಲಿ ಜನರು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಜನರ ಪ್ರೀತಿ, ವಿಶ್ವಾಸದಿಂದ ಗೆಲುವು ಲಭಿಸಿದ್ದು, ಇದು ಕಾರ್ಯಕರ್ತರ ಗೆಲುವಾಗಿದೆ. ಈ ವಿಜಯ ಕಾರ್ಯಕರ್ತರಿಗೆ ಅರ್ಪಣೆಯಾಗಿದೆ ಎಂದು ಹೇಳಿದರು. ರಾಯಿವ್ಯಾಪ್ತಿಯ ಜನತೆಯೊಂದಿಗೆ ಬಹು ಕಾಲದ ಒಡನಾಟವಿದ್ದು, ಗುಲುವಿಗೆ ಶಕ್ತಿ ನೀಡಿದ ಕ್ಷೇತ್ರವಾಗಿದೆ. ಜನತೆ ಆಶೀರ್ವಾದದಿಂದ ಈ ಭಾಗದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದರ ಜತೆಗೆ ಜನತೆಯ ಸೇವೆಗೆ ಹಗಲಿರುಳು ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.

ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಜತೆ ಒಂದಾಗಿ ದುಡಿದು, ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಲು ಪ್ರಯತ್ನ ಪಡುತ್ತೇನೆ ಎಂದ ಅವರು ಮುಂದಿನ ಲೋಕಸಭಾ ಚುನಾವಣೆಗೆ ಇದೇ ರೀತಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ದಿನೇಶ್ ಭಟ್ ದೈಲಾ, ರಾಯಿ ಬಿಜೆಪಿ ವಲಯಾಧ್ಯಕ್ಷ ಪರಮೇಶ್ವರ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ಪ್ರಮುಖರಾದ ಪ್ರಭಾಕರ ಪ್ರಭು, ರಶ್ಮಿತ್ ಶೆಟ್ಟಿ ಕೈತ್ರೋಡಿ, ರಮನಾಥ ರಾಯಿ, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಪದ್ಮನಾಭ ಗೌಡ, ಸಂತೋಷ್ ರಾಯಿಬೆಟ್ಟು, ಮಧುಕರ ಬಂಗೇರ, ರಾಘವ ಅಮೀನ್, ಪುಷ್ಪಲತಾ, ಕುಸುಮ, ಸದಾನಂದ ಗೌಡ ಮತ್ತಾವು, ಸದಾನಂದ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜೇಶ್ ನಾೈಕ್ ಅವರನ್ನು ವಿವಿಧ ಬೂತ್ ಸಮಿತಿಗಳ ವತಿಯಿಂದ ಸಮ್ಮಾನಿಸಲಾಯಿತು. ಭಜನ ಮಂಡಳಿ ವತಿಯಿಂದ ಜನಾರ್ದನ ಗೌಡ ಅವರ ಚಿಕಿತ್ಸೆಗಾಗಿ ಆರೋಗ್ಯ ನಿಧಿಯನ್ನು ಶಾಸಕರು ವಿತರಿಸಿದರು.
ಗಣೇಶ್ ಬರೆಬಾಯಿ ಸ್ವಾಗತಿಸಿ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
