ಬಂಟ್ವಾಳ: ರಂದು ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮ ಸಂಸತ್ ಮೂಲಕ ಸಂತ ಸಮಾವೇಶ ನಡೆಯುವುದು ಶ್ರೀ ರಾಮಚಂದ್ರನಿಗೆ ನಡೆಯುವ ಪಟ್ಟಾಭಿಷೇಕ, ಸನಾತನ ಹಿಂದೂ ಧರ್ಮಕ್ಕೆ ನಡೆಯುವ ಪಟ್ಟಾಭಿಷೇಕ ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ನಡೆಯಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಮತ್ತು ಧರ್ಮ ಸಂಸದ್ 2018ರ ಅಂಗವಾಗಿ ಭಾನುವಾರ ಮೆಲ್ಕಾರ್‍ನ ಬಿರ್ವ ಮಿನಿ ಸಭಾಭವನದಲ್ಲಿ ನಡೆದ ಧರ್ಮಜಾಗೃತಿ ಪೂರ್ವಭಾವಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಬದುಕಿಗೆ ಸಂಸ್ಕಾರದ ಸಿಗಬೇಕು, ಪ್ರಸ್ತುತ ಕಾಲಘಟ್ಟದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚುತ್ತಿದೆಯೇ ವಿನಃ ವಿದ್ಯಾವಂತರದ್ದಲ್ಲ. ವಿನಯ ಇಲ್ಲದ ವಿದ್ಯೆ ಅಹಂಕಾರಕ್ಕೆ ದಾರಿ ಮಾಡುಕೊಡುತ್ತದೆ. ಮನುಷ್ಯನಲ್ಲಿ ಸಜ್ಜನಿಕೆ ಬರಬೇಕಾದರೆ ವೇದಾಂತಗಳನ್ನು ಅಧ್ಯಯನ ಮಾಡಬೇಕು ಎಂದರು. ರಾಷ್ಟ್ರೀಯ ಧರ್ಮಸಂಸತ್ ದೇಶ ಹಾಗೂ ಧರ್ಮದ ಕೆಲಸ , ಧರ್ಮದ ಪಾಲನೆ ಮಾಡಿದರೆ ದೇಶದ ರಕ್ಷಣೆಯಾಗುತ್ತದೆ. ಜಾತಿ, ಪಕ್ಷ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಈ ಪುಣ್ಯಕಾರ್ಯದಲ್ಲಿ ಭಾಗಿಗಳಾಗಬೇಕು ಎಂದರು.BTW_JULY1_1

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಸಮಾಜವನ್ನು ಒಗ್ಗೂಡಿಸಲು, ಮನೆ-ಮನಗಳನ್ನು ಬೆಸೆಯುವ ಕಾರ್ಯ ಆಗಬೇಕಾಗಿದೆ. ನೈತಿಕ ಮೌಲ್ಯಗಳನ್ನು ಉಳಿಸಿ, ದ್ವೇಷ, ಅಸೂಯೆ, ಕ್ರೋಧಗಳಿಗೆ ಕಡಿವಾಣ ಹಾಕಬೇಕಾಗಿದೆ. ಇಂತಹ ಆದರ್ಶದ ಕೆಲಸ ಧರ್ಮಸಂಸತ್ ಮೂಲಕ ಆಗಲಿದೆ. ದೇಶದ ಚರಿತ್ರೆಯಲ್ಲಿ ಸುವರ್ಣಕ್ಷರದಲ್ಲಿ ಬರೆದಿಡುವ ಹಾಗೂ ಜಗತ್ತಿಗೆ ಬೆಳಕು ನೀಡುವ ಕಾರ್ಯಕ್ರಮ ಇದಾಗಲಿದೆ ಎಂದರು.
ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ ಧರ್ಮ ಚಿಂತನೆ ಸಜೀವವಾಗಬೇಕು, ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಆಗಬೇಕು. ನಾವೆಲ್ಲರೂ ಒಂದೇ ಎನ್ನುವ ಮೂಲಕ ಧರ್ಮಸಂಸತ್‍ನ ಕಾರ್ಯ ಆಗಬೇಕು ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ ನಂಬಿಕೆಗಳನ್ನು ಮೂಢನಂಬಿಕೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ವಿಶ್ವಾಸ, ನಂಬಿಕೆಯೇ ಜೀವನ ಕ್ರಮವಾಗಿದ್ದು ಅದನ್ನು ಉಳಿಸಿಕೊಳ್ಳಬೇಕಾಗಿದೆ. ಧರ್ಮವನ್ನು ಉಳಿಸಲು ಎಲ್ಲರೂ ಕಂಕಣ ಬದ್ದರಾಗಬೇಕಾಗಿದೆ ಎಂದರು.ಮಾಜಿ ಸಚಿವರಾದ ಬಿ.ರಮಾನಾಥ ರೈ, ನಾಗರಾಜ ಶೆಟ್ಟಿ, ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಧರ್ಮಸಂಂಸದ್ ಸಮಿತಿಯ ಜಿಲ್ಲಾ ಸಂಚಾಲಕ ಸತ್ಯಜಿತ್ ಸುರತ್ಕಲ್, ಬಂಟ್ವಾಳ ತಾಲೂಕು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವಶಾಂತಿ ಮಾತನಾಡಿದರು.

ಧರ್ಮಸಂಸತ್ ಸಮಿತಿಯ ಜಿಲ್ಲಾಧ್ಯಕ್ಷ ಚಿತ್ತರಂಜನ್ ಗರೋಡಿ, ಮೋಹನ್ ಉಜ್ಜೋಡಿ, ಪ್ರವೀಣ್ ವಾಲ್ಕೆ, ಪಿತಾಂಬರ ಹೆರಾಜೆ, ರುಕ್ಮಯ ಪೂಜಾರಿ, ಸಂಜೀವ ಪೂಜಾರಿ, ಅಶೋಕ್ ಶೆಟ್ಟಿ ಸರಪಾಡಿ, ರತ್ನಾಕರ ಶೆಟ್ಟಿ ಕಲ್ಲಡ್ಕ, ತಾರನಾಥ ಕೊಟ್ಟಾರಿ, ತಾಲೂಕು ಸಮಿತಿ ಪ್ರಧಾನ ಸಂಚಾಲಕ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ವೇದಿಕೆಯಲ್ಲಿದ್ದರು.ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಕಮಲಾಕ್ಷಿ ಪೂಜಾರಿ, ಪ್ರಮುಖರಾದ ಪದ್ಮನಾಭ ರೈ, ಮಾಧವ ಮಾವೆ, ಸುಲೋಚನಾ ಭಟ್, ಜಗದೀಶ್ ಕುಂದರ್, ದೇವದಾಸ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ , ಮಾಯಿಲಪ್ಪ ಸಾಲ್ಯಾನ್ ಹಾಜರಿದ್ದರು.

ಸಮಿತಿ ಪ್ರಮುಖರಾದ ರಾಮದಾಸ ಬಂಟ್ವಾಳ ಸ್ವಾಗತಿಸಿದರು, ಕ್ಷೇತ್ರದ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು, ಬೇಬಿ ಕುಂದರ್ ವಂದಿಸಿದರು. ಸಂತೋಷ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *