ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್‍ನ ಸುವರ್ಣ ವರ್ಷಾಚರಣೆ ಪ್ರಯುಕ್ತ ಸೇವಾ ಚಟುವಟಿಕೆಗಳ ಅಂಗವಾಗಿ ಮಣಿನಾಲ್ಕೂರು ಸರಕಾರಿ ಪ್ರೌಢ ಶಾಲೆಗೆ 4.5 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ ಜರಗಿತು.

ರೋಟರಿ ಜಿಲ್ಲಾ ಗವರ್ನರ್ ಪಿ.ಎಚ್.ಎಫ್. ಸುರೇಶ್ ಚೆಂಗಪ್ಪ ಅವರು ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ ಜನಪರ ಕಾರ್ಯಕ್ರಮಗಳಿಂದ ಮಾದರಿ ಕ್ಲಬ್ ಎಂದು ಗುರುತಿಸಲ್ಪಟ್ಟಿದೆ ಎಂದು ಹೇಳಿದರು.ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರೋ| ಸಂಜೀವ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸುವರ್ಣ ಮಹೋತ್ಸವದ ಆಚರಣೆ ನಿಯೋಜಿತ ಅಧ್ಯಕ್ಷ ರೋ| ಪಿ.ಎಚ್.ಎಫ್. ಮಂಜುನಾಥ ಆಚಾರ್ಯ, ರೋ| ಪಿ.ಎಚ್.ಎಫ್.ಸೂರ್ಯನಾರಾಯಣ ರಾವ್, ವಲಯ 4ರ ಸಹಾಯಕ ಗವರ್ನರ್ ರೋ| ಪಿ.ಎಚ್.ಎಫ್. ಪ್ರಕಾಶ್ ಕಾರಂತ, ರೋ| ನಾರಾಯಣ ಹೆಗಡೆ, ರೋ| ಶಿವಾನಿ, ಎ.ಜಿ. ರೋ| ರೋಟರಿಯನ್, ಎ.ಎಂ. ಕುಮಾರ್, ರೋ| ಪ್ರಕಾಶ್ ಬಾಳಿಗ, ರೋ| ವರದರಾಜ್ ಬಂಗೇರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ಸದಸ್ಯರು, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಲೋಕ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ರೆಜಿಲಾ ಪಾೈಸ್ ವಂದಿಸಿದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
