ಕಟೀಲು:ಸ್ವಚ್ಚ ಭಾರತ ಕಲ್ಪನೆ ನಮ್ಮಿಂದ ಮಾತ್ರ ಸಾದ್ಯ ಎಂದು ರಾಮಕೃಷ್ಣ ಆಶ್ರಮದ ರಂಜನ್ ಹೇಳಿದರು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಪ್ರಸ್ತುತಪಡಿಸಿದ ಮೆಗಾ ಸ್ಟಾರ್ ಕುದ್ರೋಳಿ ಗಣೇಶ್ ಅವರಿಂದ ಸ್ವಚ್ಚತೆಗಾಗಿ ಜಾದು ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಚ್ಚತೆ ಎಂಬುದು ಮಕ್ಕಳಿಂದಲೇ ಪ್ರಾರಂಭವಾಗಬೇಕು ಅದಕ್ಕಾಗಿ ಸ್ವಚ್ಚತೆಗಾಗಿ ಜಾದು ಎನ್ನುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಜಿಲ್ಲೆಯಾದಂತ್ಯ ಬೇರೆ ಬೇರೆ ಶಾಲೆಗಳಲ್ಲಿ 100 ಪ್ರಯೋಗಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಟೀಲು ದೇವಳದ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟರೆ ನಮಗೆಯೇ ಲಾಭ, ಇದರಿಂದ ರೋಗ ರುಜಿನಗಳಿಂದ ದೂರವಾಗಿರಬಹುದು, ಅಲ್ಲದೆ ರೋಗವೇ ಇಲ್ಲದ ಜಾದೂ ಆಗಬಹುದು ಎಂದರು. ಈ ಸಂದರ್ಭ ಖಾಲಿ ಪ್ರೇಮ್ ನಿಂದ ವಿವೇಕಾನಂದರ ಭಾವ ಚಿತ್ರ, ಮತ್ತು ಖಾಲಿ ಡಬ್ಬದಿಂದ ಮಾಲೆಯನ್ನು ಸೃಷ್ಟಿಸಿ ವಿವೇಕಾನಂದ ಭಾವಚಿತ್ರಕ್ಕೆ ಮಾಲೆಯನ್ನು ಹಾಕುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕುದ್ರೋಳಿ ಗಣೇಶ್ ಸ್ವಚ್ಚ ಪರಿಸರಕ್ಕೆ ಸಂಬಂಧಿಸಿ ವಿವಿಧ ಜಾದುಗಳನ್ನು ನಡೇಸಿಕೊಟ್ಟರು. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸ್ವಚ್ಚ ಬಾರತ ನಿರ್ಮಿಸುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಟೀಲು ಪದವಿ ಕಾಲೇಜಿನ ಪ್ರಾಶುಂಪಾಲ ಬಾಲಕೃಷ್ಣ ಶೆಟ್ಟಿ, ಪ್ರೌಢಶಾಲಾ ವಿಭಾಗದ ಉಪಪ್ರಾಶುಂಪಾಲ ಸೋಮಪ್ಪ ಅಲಂಗಾರ್, ಶಿಕ್ಷಕ ಸಾಯಿನಾಥ ಶೆಟ್ಟಿ, ಸಂತೋಷ್ ಅಳ್ವ, ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯನಿ ಸರೋಜಿನಿ, ಅಂಗ್ಲ ಮಾದ್ಯಮ ಶಾಲೆಯ ಮುಖ್ಯೋಪದ್ಯಾಯನಿ ಜಯಲಕ್ಷೀ ಮತ್ತಿತರರು ಇದ್ದರು.
ಬೈಟ್
ಮಕ್ಕಳಿಗೆ ಜಾದೂ ಎಂದರೆ ತುಂಭಾ ಇಷ್ಟ ಮಕ್ಕಳಿಗೆ ಈ ವಯಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಕಲಿಸಿದರೆ ಅದು ಮುಂದುವರಿಯಲು ಸಾದ್ಯ, ಜಾದೂ ಮೂಲಕ ಸ್ವಚ್ಚ ಭಾರತದ ಕಲ್ಪನೆಯನ್ನು ಮಕ್ಕಳ ಮನಸ್ಸಿಗೆ ಬಿತ್ತುತ್ತಿದ್ದೇವೆ, ಇದರಿಂದ ಸ್ವಚ್ಚ ಭಾರತ ಮಾಡಲು ಸಾದ್ಯ, ನಾವು ಮತ್ತು ನಮ್ಮ ಮನಸ್ಸು ಸ್ವಚ್ಚವಾಗಿರಬೇಕು ಅಲ್ಲದೆ ಸ್ವಚ್ಚತೆ ನಮ್ಮಿಂದಲೇ ಪ್ರಾರಂಭವಾಗಬೇಕು.
ಕುದ್ರೋಳಿ ಗಣೇಶ್. ಜಾದುಗಾರ
