ಮುಂಬಯಿ: ಮುಂಬಯಿಯಲ್ಲಿನ ಯುವ ಉದ್ಯಮಿ, ಡೆನ್ ಸ್ಯಾಟಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಡಿ’ಸೋಜಾ ಕಲ್ಯಾಣ್ಫುರ (52.) ಅವರು ಕಿಡ್ನಿ ವೈಫಲ್ಯದಿಂದ ಇಂದಿಲ್ಲಿ ಸೋಮವಾರ ಬೆಳಿಗ್ಗೆ ಮಹಾನಗರದ ಪೋವಾಯಿ ಅಲ್ಲಿನ ಹೀರಾನಂದನಿ ಆಸ್ಪತ್ರೆಯಲ್ಲಿ ನಿಧನರಾದರು.Prakash D'Souza DEN

ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುಬೆಟ್ಟು ಮೂಲತಃ ಪ್ರಕಾಶ್ ಡಿ’ಸೋಜಾ ಅವರು ತೆರೆಮರೆಯಲ್ಲಿದ್ದೇ ಸಮಾಜ ಸೇವೆಗೆ ಸ್ಪಂದಿಸುತ್ತ ತುಳುಕನ್ನಡ, ಕೊಂಕಣಿ ಕಾರ್ಯಕ್ರಮಗಳಿಗೆ ತಮ್ಮ ಕೇಬಲ್ ಮೂಲಕ ಪ್ರೋತ್ಸಾಹಿಸುತ್ತಿದ್ದರು.

ಮೃತರು ಮುಂಬಯಿ  ಪೋವಾಯಿ ಅಲ್ಲಿನ ಹಿರಾನಂದನಿ ಗಾರ್ಡನ್ ಸನಿಹದ ವಲೆನ್ಸಿಯಾ ಬಿಲ್ಡಿಂಗ್‍ನಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪತ್ನಿಯನ್ನು ಅಗಲಿಗ ಅಘಾತದಲ್ಲಿದ್ದರು. ಮೃತರು ಸುಪುತ್ರಿ ಸಮಾಂತ ಡಿ’ಸೋಜಾ, ತಂದೆ,ತಾಯಿ, ಮೂವರು ಸಹೋದರರು, ಮೂರು ಸಹೋದರಿಯರನ್ನು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ನಾಳೆ ಮಂಗಳವಾರ (ಜೂ.26) ಸಂಜೆ 3.30 ಗಂಟೆಗೆ ಸ್ವನಿವಾಸದಿಂದ ಹೊರಟು ಸಂಜೆ 4.00 ಗಂಟೆಗೆ  ಪೋವಾಯಿ ಹೋಲಿ ಟ್ರಿನಿಟಿ ಇಗರ್ಜಿಯಲ್ಲಿ ನೆರವೆರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ತಮ್ಮ ಸಹದ್ಯೋಮಿಗಳೂ ಡೆನ್ ಕೇಬಲ್‍ನೆಟ್‍ನ ನಿರ್ದೇಶಕರೂ ಆದ ರಾಜೀವ್ ಗವಿ, ರವಿ ಸಿಂಗ್, ಅಶ್ವ್ವಿನಿ ಕೇಬಲ್ ನೆಟ್‍ವರ್ಕ್ಸ್‍ನ ವಾಲ್ಟರ್ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ), ಇನ್ ಕೇಬಲ್ ಥಾಣೆ ಇದರ ವ್ಯವಸ್ಥಾಪಕ ನೊಬ್ಬಿ ಪಿಳ್ಳೆ, ಹ್ಯಾರಿ ಸಿಕ್ವೇರಾ ಫೆರಾರ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *