ಬಂಟ್ವಾಳ: ಸೆರ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲವನ್ನು ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ಮುಝಮಿಲ್, ಉಪಮುಖ್ಯಮಂತ್ರಿಯಾಗಿ ಕಾರ್ತಿಕ್, ಗೃಹಮಂತ್ರಿಯಾಗಿ ಸಫೀಕ್, ಶಿಕ್ಷಣ ಮಂತ್ರಿಯಾಗಿ ಇರ್ಫಾನಾ, ಆರೋಗ್ಯ ಮಂತ್ರಿಯಾಗಿ ಆಯಿಷಾ ಸಿಫಾನ, ಕ್ರೀಡಾಮಂತ್ರಿಯಾಗಿ ರೈಝ್, ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತ, ಮುನಿಬಾ, ತೋಟಗಾರಿಕಾ ಮಂತ್ರಿಯಾಗಿ ಸಾಬಿತ್ ರೈಯಿಜ್, ನೀರಾವರಿ ಮಂತ್ರಿಯಾಗಿ ಸುರೇಂದ್ರ, ತಾರಾನಾಥ ಆಯ್ಕೆಯಾದರು. ಮುಖ್ಯ ಶಿಕ್ಷಕ ದಾಮೋದರ ಏರ್ಯ, ಸಹಶಿಕ್ಷಕರಾದ ಸವಿತ, ಪ್ರಸಾದ್ಕುಮಾರ್, ಕೀರ್ತಿ ಕೆ., ಉಮಾ ಸಹಕರಿಸಿದರು.
