ಕೈಕಂಬ : ಪೊಳಲಿ ಕೈಕಂಬ ರಸ್ತೆಯ ಮಧ್ಯೆ ಅಡ್ಡೂರು ನೂಯಿ ಎಂಬಲ್ಲಿಯ ಕೃಷಿ ಜಮೀನಿನ ರಸ್ತೆ ಮೇಲ್ಭಾಗದ ಗುಡ್ಡದ ನೀರು ಕೆಳಗಡೆ ಹರಿದು ಹೋಗಲು ಅವೈಜ್ಞಾನಿಕ ರೀತಿಯಲ್ಲಿ ಮೋರಿ, ಪೈಪ್ ಅಳವಡಿಸಿ ಗುಡ್ಡ ಸಮತಟ್ಟುಗೊಳಿಸಿ ರಸ್ತೆನಿರ್ಮಿಸಿದ ಪರಿಣಾಮ ಮಳೆಗಾಲದಲ್ಲಿ ಮೇಲಿಂದ ಪ್ರವಾಹೋಪಾದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮಣ್ಣಿಂದ ಕೂಡಿದ ಕೆಸರುನೀರು ಸ್ಥಳೀಯ ಪರಂಬೋಕು ತೋಡಿನಲ್ಲಿ ಜಮೆಯಾದ ಪರಿಣಾಮ, ಕೆಳಭಾಗದ ಪ್ರಗತಿಪರ ಕೃಷಿಕರೊಬ್ಬರ ಭತ್ತ ಹಾಗೂ ಅಡಕೆ ತೋಟ ಸಂಪೂರ್ಣ ಬಂಜರಾಗಿದ್ದು, ಈಗಾಗಲೇ ಲಕ್ಷಾಂತರ ರೂ ನಷ್ಟ ಅನುಭವಿಸಿದ್ದಾರೆ.24vp thodu raste mori

ಪೈಪ್ ಅಳವಡಿಸುವಾಗ ನೀರು ಸುಗಮವಾಗಿ ಹರಿದು ಹೋಗಲು ಚೇಂಬರ್ ನಿರ್ಮಾಣ ಮಾಡದ್ದರಿಂದ ಮೇಲಿನ ನೀರು ಯಾವುದೇ ಅಡೆತಡೆಯಿಲ್ಲದೆ ತೋಡಿನ ಮೂಲಕ ಕೆಳಗಿನ ಕೃಷಿ ಭೂಮಿಗೆ ಹರಿಯುತ್ತಿದೆ. ಕಳೆದ ವರ್ಷದಿಂದ ಇಲ್ಲಿ ಈ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ತಾನು ಜಿಲ್ಲಾಧಿಕಾರಿ, ತಹಶೀಲ್ದಾರ್, ಕಂದಾಯ ಅಧಿಕಾರಿ ಹಾಗೂ ಸಂಬಂಧಿತ ಇಲಾಖೆಗಳಿಗೆ ಮನವಿ ಮಾಡಿದ್ದೇನೆ. ಆದರೆ, ತಹಿಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ, ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆಯೇ ಹೊರತು ಈವರೆಗೆ ಇಲ್ಲಿ ಯಾವುದೇ ಪರಿಹಾರ ಕಾರ್ಯ ನಡೆಸಿಲ್ಲ ಎಂದು ಕೃಷಿಕ ನೂಯಿ ಬಾಲಕೃಷ್ಣ ರಾವ್ ದೂರಿದ್ದಾರೆ.24vpbanjaru gadde

ಮೂರು ಎಕ್ರೆ ಭತ್ತದ ಜಮೀನು ಹಾಗೂ ಎರಡು ಎಕ್ರೆ ಅಡಕೆ ತೋಟ ಹೊಂದಿರುವ ರಾವ್ ತನಗಾದ ತೊಂದರೆ ಪರಿಣಾಮ ಕಳೆದ ವರ್ಷದಿಂದ ಭತ್ತ ಬೆಳೆಯಲು ಆಗದೆ ಭತ್ತದ ಗದ್ದೆಗಳು ಹುಲ್ಲುಹಾಸಿನಂತಾಗಿವೆ. ಇದರಿಂದ ಸುಮಾರು 2ರಿಂದ ಮೂರು ಲಕ್ಷ ರೂ ನಷ್ಟವಾಗಿದೆ. ಕೃಷಿಕರಾಗಿದ್ದು, ಹೈನುಗಾರಿಕೆ ನಡೆಸುತ್ತಿರುವ ಇವರೀಗ ಜಾನುವಾರಿಗೆ ಬೈಹುಲ್ಲು ವರ್ಷಕ್ಕೆ 12,000 ಬೈಹುಲ್ಲಿಗೆ 48 ಸಾವಿರದಿಂದ 50 ಸಾವಿರ ಕೊಟ್ಟು ಬೈಹುಲ್ಲು ಖರೀದಿಸುವಂತಹ ದಯನೀಯ ಪರಿಸ್ಥಿತಿ ಉಂಟಾಗಿದೆ.22-1

ರಾವ್ ಅವರ ಅಡಕೆ ತೋಟದಲ್ಲಿ ಗುಡ್ಡದ ಕೆಸರು ನೀರು ತುಂಬಿರುವುದರಿಂದ ಅಡಕೆ ಮರಗಳು ರೋಗಗ್ರಸ್ತವಾಗಿದ್ದು, ಒಂದೊಂದಾಗಿ ಉರುಳುತ್ತಿವೆ. ಪಕ್ಕದ ಭತ್ತದ ಗದ್ದೆ ಮತ್ತು ಮಣ್ಣು-ಮರಳು ತುಂಬಿದ ಪರಂಬೋಕು ತೋಡು ತಮತಟ್ಟಾಗಿದ್ದು, ಗದ್ದೆಯೇ ತೋಡಾಗಿದೆ.22-3

ಅಡ್ಡೂರು, ಕಾಂಜಿಲಕೋಡಿ, ನೂಯಿಯಲ್ಲಿ ಅತಿ ದೊಡ್ಡ ಪರಂಬೋಕು ತೋಡು ಇದಾಗಿದ್ದು, ಮಣ್ಣು ತೆಗೆದು ತೋಡು ಆಳ ಮಾಡಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದ್ದರು. ಆದರೆ ಆ ಕೆಲಸ ಇನ್ನೂ ಆಗಿಲ್ಲ. ಇನ್ನು ಅತ್ತ ಕಾಜಿಲಕೋಡಿಯಿಂದ ತಾರಿಕರಿಯಕ್ಕೆ ರಸ್ತೆಯೊಂದು ನಿರ್ಮಿಸಲಾಗಿದ್ದು, ಮೂಲ ತೋಡು ಅಳಿಸಿ ಹಾಕಿ ರಸ್ತೆ ಮೋರಿಗೆ ಸುತ್ತುಬಳಸಿ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಆ ಭಾಗದಲ್ಲಿರುವ ನನ್ನ ಭತ್ತದ ಗದ್ದೆಯೂ ಜಲಾವೃತಗೊಂಡು ಬಂಜರಾಗಿದೆ ಎಂದು ರಾವ್ ದೂರಿದ್ದಾರೆ.24vpthodu

24vp balakrishna rao

“ರಾಜ್ಯ ಪಟೇಲರ ಸಂಘದ ಅಧ್ಯಕ್ಷ, ಫಲ್ಗುಣಿ ಕೃಷಿಕರ ಸಂಘದ ಗುರುಪುರ-ಕೈಕಂಬ ಘಟಕಾಧ್ಯಕ್ಷನಾಗಿರುವ ನನ್ನಂತಹ ಕೃಷಿಕನಿಗೆಯೇ ಈ ಗತಿಯಾದರೆ, ಇನ್ನು ಸಾಮಾನ್ಯ ಕೃಷಿಕರ ದೂರುಗಳಿಗೆ ನಮ್ಮ ಇಲಾಖೆ ಬದ್ಧತೆ ಮೂಲಕ ಸ್ಪಂದಿಸುವುದೇ ?” ಎಂದು ನೂಯಿ ಬಾಲಕೃಷ್ಣ ರಾವ್  ಎಂದು ಅಸಾಯಕತೆ ವ್ಯಕ್ತಪಡಿಸಿದ್ದಾರೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

By Suddi9

Leave a Reply

Your email address will not be published. Required fields are marked *