ಅಮ್ಮುಂಜೆ: ಬಿಜೆಪಿ ಗ್ರಾಮ ಸಮಿತಿಯಿಂದ ನೂತನ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಇಲ್ಲಿನ ಬೆಂಜನಪದವು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ ಬಿಜೆಪಿ ಅಮ್ಮುಂಜೆ ಗ್ರಾಮ ಸಮಿತಿಯಿಂದ ಶಾಸಕ ರಾಜೇಶ್ ನಾಯ್ಕ್ ಹಾಗೂ ಹಿರಿಯ ಬಿಜೆಪಿ ನೇತಾರ ಶೀನ ಶೆಟ್ಟಿ ಕಲಾಯಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬಿಜೆಪಿ ಅಮ್ಮುಂಜೆ ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಬಾರಿಂಜೆ ವಹಿಸಿದ್ದರು. ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಕ್ಷೇತ್ರ ಸಮಿತಿಯ ಬಿಜೆಪಿ ಅಧ್ಯಕ್ಷ ದೇವುದಾಸ್ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೋಟ್ಟಾರಿ, ಬಿಜೆಪಿ ಅಮ್ಮುಂಜೆ ಗಾಮ ಸಮಿತಿ ಸಂಚಾಲಕ ರೋನಾಲ್ಡ್ ಡಿ’ ಸೋಜ, ಪ್ರಗತಿಪರ ಕೃಷಿಕ ವಿನೋದ್ ಶೆಟ್ಟಿ ಅಮ್ಮುಂಜೆ, ಭದ್ರಕಾಳಿ ದೇವಸ್ಥಾನದ ಆಡಳಿತ ಮೋಕ್ತೆಸ ರಮೇಶ್ ಬೆಂಜನಪದವು, ಉದ್ಯಮಿ ಉಮೇಶ್ .ಬಿ, ರವಿಸುವರ್ಣ ಅಮ್ಮುಂಜೆ, ಪ್ರವೀಣ ಬೆಂಜನಪದವು, ಸುರೇಶ್ ಬೆಂಜನಪದವು, ನಿಶಾಂತ್ ಅಮ್ಮುಂಜೆ, ಕಾರ್ತಿಕ್ ಬಳ್ಳಾಲ್, ಆದಂ ಕಲಾಯಿ, ಸುಧಾಕರ ಶೆಟ್ಟಿ ಕಲಾಯಿ, ರೋನಲ್ಡ್ ಮತ್ತಿತರರು ಉಪಸ್ಥಿತರಿದ್ದರು.
ಅಮ್ಮುಂಜೆ ಗ್ರಾಮ ಸಮಿತಿಯ ಕಾರ್ಯದರ್ಶಿ ವಾಮನ ಆಚಾರ್ಯ ಸ್ವಾಗತಿಸಿದರು, ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮನ್ನು ನಿರೂಪಿಸಿದರು.



