kesaru1-clr

ಬಂಟ್ವಾಳ: ಇದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಡ್ಡಕಟ್ಟೆ. ಆದರೆ ಇಲ್ಲಿ ಹೆಜ್ಜೆ ಹಾಕಬೇಕಾದರೆ ಧೈರ್ಯ ಬೇಕು. ಯಾಕೆಂದರೆ ಇಲ್ಲಿನ ಪುರಸಭೆಯ ವಾಣಿಜ್ಯ ಸಂಕೀರ್ಣದ ಎದುರು ಕೆಸರಿನ ಕೆರೆಯೇ ನಿರ್ಮಾಣಗೊಂಡಿದ್ದು ಸಮಸ್ಯೆ ಎದುರಾಗಿದೆ.

ಮಳೆಗಾಲದಲ್ಲಿ ವಾಣಿಜ್ಯ ಸಂಕೀರ್ಣದ ಎದುರು ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ನೀರು ನಿಲ್ಲುವುದರಿಂದ ಕೆರೆ ನಿರ್ಮಾಣಗೊಳ್ಳುತ್ತಿದ್ದು, ಪುರಸಭೆ ತಕ್ಷಣ ಈ ಬಗ್ಗೆ ಗಮನ ಹರಿಸಬೇಕಿದೆ.

ಇಲ್ಲಿಗೆ ಬರುವ ವಾಹನಗಳೂ ಕೆಸರಿನಲ್ಲಿ ಹೂತು ಹೋಗುವ ಘಟನೆಗಳೂ ಇಲ್ಲಿ ನಡೆಯುತ್ತಿದ್ದು, ಅಂಗಡಿಯೊಳಗೆ ಕೆಸರಿನ ಸಿಂಚನವಾಗುತ್ತಿದೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಇಲ್ಲಿನವರ ಸಂಕಷ್ಟವನ್ನು ಬಗೆಹರಿಸಬೇಕಾಗಿದೆ.

By Suddi9

Leave a Reply

Your email address will not be published. Required fields are marked *