ಕಲ್ಲಡ್ಕ: ‘ಪ್ರಕೃತಿ’ ನಮ್ಮಗುರುಎಂಬುದು ಭಾರತದ ವಿಶೇಷತೆ.ಇಂತಹ ಪ್ರಕೃತಿಯನ್ನುದೇವರರೂಪದಲ್ಲಿಆರಾಧನೆ ಮಾಡುವರಾಷ್ಟ್ರ ನಮ್ಮದು.ಈ ರೀತಿಯ ಶ್ರೇಷ್ಠ ವಿಚಾರಧಾರೆಗಳನ್ನು ಜಗತ್ತಿಗೆ ಭಾರತ ನೀಡಿದಾಗ ವಿಶ್ವದಕಲ್ಯಾಣ ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದ ಡಾ|ಪ್ರಭಾಕರ ಭಟ್ ಹೇಳಿದರು. ಅವರು ಗುರುವಾರ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪ್ರೌಢಶಾಲೆಯ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ಆಗತ-ಸ್ವಾಗತ’ ಕಾರ್ಯಕ್ರಮ ನೆರವೇರಿತು. ಇದಕ್ಕಾಗಿ ಭಾರತ ಬಲಿಷ್ಠವಾಗಬೇಕು.ಪ್ರತಿ ಪ್ರಜೆಯಲ್ಲೂರಾಷ್ಟ್ರಭಕ್ತಿಯನ್ನು ಉದ್ದೀಪನ ಮಾಡುವಕಾರ್ಯ ನಡೆಸಬೇಕು.ಇದು ಶಿಕ್ಷಣದಿಂದ ಸಾದ್ಯ.ಇದಕ್ಕಾಗಿ ನಮ್ಮ ವಿದ್ಯಾಕೇಂದ್ರ ಭಾರತೀಯ ವಿಚಾರಧಾರೆಗಳನ್ನು ಒಳಗೊಂಡ ಸಂಸ್ಕಾರಯುತ ಶಿಕ್ಷಣ ನೀಡುವುದು ನಮ್ಮ ವಿದ್ಯಾಕೇಂದ್ರದಧ್ಯೇಯ.ಆ ಮೂಲಕ ಪ್ರತಿ ವಿದ್ಯಾರ್ಥಿಯನ್ನುರಾಷ್ಟ್ರಪೂರಕಕಾರ್ಯ ನಡೆಸಬಲ್ಲ ಸತ್ಪ್ರಜೆಗಳನ್ನು ರೂಪಿಸುತ್ತಿದೆಎಂದು ತಿಳಿಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಸುರೇಶ್ರಾವ್, ಉದ್ಯಮಿ ಬೆಂಗಳೂರು, ಕರಣ್ರಾವ್, ಸಲಹೆಗಾರರುಕನ್ಸಲ್ಟೆಂಟ್ಆಫ್ ಟಿ.ವಿ.ಎಸ್ಗ್ರೂಪ್, ಡಾ|ನೀರಜ್ ಶರ್ಮ, ಬೆಂಗಳೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಸೋಮಯಾಜಿ, ಅಧ್ಯಕ್ಷರು ಶ್ರೀರಾಮ ವಿದ್ಯಾಕೇಂದ್ರ ವಹಿಸಿದರು. ಕಾರ್ಯಕ್ರಮ ವೇದಿಕೆಯಲ್ಲಿ ವಸಂತಮಾಧವ, ಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ, ರಮೇಶ್ಎನ್, ಸಹಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ, ವಸಂತಿ, ಮುಖ್ಯೋಪಾಧ್ಯಾಯರು ಶ್ರೀರಾಮ ಪ್ರೌಢಶಾಲೆ, ಡಾ|ಕಮಲಾ ಪ್ರಭಾಕರ ಭಟ್ಕಲ್ಲಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನವಾಗಿ ಪ್ರೌಢಶಾಲೆಗೆ ಸೇರ್ಪಡೆಗೊಂಡವಿದ್ಯಾರ್ಥಿಗಳು ಅಗ್ನಿಕುಂಡಕ್ಕೆಘೃತಾರ್ಪಣೆ ಮಾಡಿ, ತಾಯಿ ಭಾರತಿಗೆ ಪುಷ್ಪಾರ್ಚಣೆಗೈದು, ಹಿರಿಯರಿಂದತಿಲಕಧಾರಣೆ ಹಾಗೂ ಆಶೀರ್ವಾದ ಪಡೆದರು.ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತಮಂಡಳಿ ಸದಸ್ಯರು, ಪ್ರೌಢಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಾತಾಜಿ, ಶ್ರೀಮಾನ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕರಮದಲ್ಲಿ ಅನಘಾ 9ಪತಂಜಲಿ ವೈಯಕ್ತಿಕಗೀತೆ ಹಾಡಿದಳು. ಪ್ರಶಾಂತ್ ನೇರೊಳು, ಅಧ್ಯಾಪಕರು ಶ್ರೀರಾಮ ಪ್ರೌಢಶಾಲೆ ನಿರೂಪಿಸಿ, ಶಾಂಭವಿ, ಶಿಕ್ಷಕಿ ಶ್ರೀರಾಮ ಪ್ರೌಢಶಾಲೆ ಸ್ವಾಗತಿಸಿ, ಸೌಮ್ಯ ಪಿ, ಶಿಕ್ಷಕಿ ಶ್ರೀರಾಮ ಪ್ರೌಢಶಾಲೆ ವಂದಿಸಿದರು.
