ಶ್ರೀನಿವಾಸಪುರ: ಮಾಜಿ ಶಾಸಕ ಡಾ. ಜಿ.ಕೊತ್ತುರು ಮಂಜುನಾಥ್ ರವರ ಹುಟ್ಟು ಹಬ್ಬ ಪ್ರಯುಕ್ತ ಅಭಿಮಾನಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಜೆ.ಎನ್. ನವೀನ್ ಕುಮಾರ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಬಾಲಕೃಷ್ಣ (ವೇಣು), ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವರಾಜ್, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ಮುಖಂಡರಾದ ಅಪ್ಪೂರ್ ಬಾಲಾಜಿ ಯಾದವ್, ಅಪ್ಪೂರ್ ಮಂಜುನಾಥ್, ಹರೀಶ್ ಯಾದವ್, ಮೊಹಮ್ಮದ್ ಆಲಿ ಮತ್ತಿತರರಿದ್ದರು.

