8btl-Rai

ಬಂಟ್ವಾಳ:  ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಪದವೀಧರ ಕ್ಷೇತ್ರದ ಮತದಾನದಲ್ಲಿ ಒಟ್ಟು 2,539 ಮತದಾರರ ಪೈಕಿ 928 ಮಂದಿ ಪುರುಷರು ಮತ್ತು  840 ಮಂದಿ ಮಹಿಳೆಯರು ಮತ ಚಲಾಯಿಸಿದ್ದು, ಒಟ್ಟು 1,768 ಮಂದಿ ಮತ ಚಲಾಯಿಸಿ ಶೇ. 69. 06 ಫಲಿತಾಂಶ ದಾಖಲಾಗಿದೆ.

ಶಿಕ್ಷಕರ ಕ್ಷೇತ್ರದ ಒಟ್ಟು 781 ಮತದಾರರ ಪೈಕಿ 330 ಮಂದಿ ಪುರುಷರು ಮತ್ತು 327 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 657 ಮಂದಿ ಮತ ಚಲಾಯಿಸುವ ಮೂಲಕ ಶೇ. 84. 12 ಫಲಿತಾಂಶ ದಾಖಲಾಗಿದೆ ಎಂದು ಚುನಾವಣಾ ಶಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮತಯಾಚನೆ: ಈ ಬಾರಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ಪೆಂಡಾಲ್ ಹಾಕಿ ಮತದಾರರಿಗೆ ಮತಚೀಟಿ ನೀಡುವ ಮೂಲಕ ಅಂತಿಮ ಕ್ಷಣದ ಮತಯಾಚನೆ ನಡೆಸಿತು.

ಕಾಂಗ್ರೆಸ್ಸಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಪುರಸಭಾಧ್ಯಕ್ಷ ರಾಮಕರಷ್ಣ ಆಳ್ವ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕಕರ್ೇರ ಮತ್ತಿತರರು ಇದ್ದರು. ಬಿಜೆಪಿ ವತಿಯಿಂದ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಶಾಸಕ ಕೆ.ಮೋನಪ್ಪ ಭಂಡಾರಿ, ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮತ್ತಿತರರು ಇದ್ದರು. ಇನ್ನೊಂದೆಡೆ ಜೆಡಿಎಸ್ ವತಿಯಿಂದ ಕೈಲಾರ್ ಇಬ್ರಾಹಿಂ, ಪಿ.ಎ.ರಹೀಂ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *