ನವದೆಹಲಿ: ತಿಂಗಳಿಗೆ ಒಂದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಬುಧವಾರ ತೆರವುಗೊಳಿಸಿದೆ. ಇದರಿಂದಾಗಿ ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಎನ್ನುವ ನಿರ್ಬಂಧವಿಲ್ಲದೇ, ವರ್ಷದಲ್ಲಿ ಯಾವಾಗ ಬೇಕಾದರೂ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಎನ್ನುವ ನಿರ್ಬಂಧವಿಲ್ಲದೇ, ವರ್ಷದಲ್ಲಿ ಯಾವಾಗ ಬೇಕಾದರೂ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಪೂರೈಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 14.2 ಕೆ.ಜಿ ತೂಕದ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗಳ ಕೋಟಾವನ್ನು 9ರಿಂದ 12ಕ್ಕೆ ಹೆಚ್ಚಿಸಿ, ತಿಂಗಳಿಗೆ ಒಂದು ಸಿಲಿಂಡರ್ ಅನ್ನು ನೀಡುವ ತೀರ್ಮಾನವನ್ನು ಕಳೆದ ಫೆಬ್ರವರಿಯಲ್ಲಿ ತೆಗೆದುಕೊಂಡಿತ್ತು. ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ತೀರ್ಮಾನದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಿದೆ
