KAR_0151

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರಿನ ಶಾರದಾ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ  ಆಯೋಜಿಸಿದ್ದ ಕಾನೂನು ಮಾಹಿತಿ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಇಮ್ತಿಯಾಝ್ ಅಹಮ್ಮದ್ ಉದ್ಘಾಟಿಸಿದರು.

ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಕೆ.ನರೇಂದ್ರನಾಥ ಭಂಡಾರಿ ಬಾಲಾಪರಾಧಿ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ  ಸಹಯಾಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ, ಶಾಲಾ ಸಂಚಾಲಕ ಜನಾರ್ಧನ್ ಭಟ್,  ದ.ಕ.ಕೇಂದ್ರ ಸರಕಾರಿ ವಕೀಲ ಪ್ರಸಾದ್ ಕುಮಾರ್ ರೈ, ಹಿರಿಯ ನ್ಯಾಯವಾದಿ ಅಜಿತ್ ಕುಮಾರ್ ರಾವ್, ಸತೀಶ್ ಬಿ., ತಾ.ಕಾ.ಸೇವೆ ಸಮಿತಿ  ಸಿಬ್ಬಂದಿ ನರಸೇಗೌಡ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಚಂದ್ರಶೇಖರ ರಾವ್ ಸ್ವಾಗತಿಸಿದರು. ನ್ಯಾಯವಾದಿ ಚಂದ್ರಶೇಖರ ಬೈರಿಕಟ್ಟೆ ವಂದಿಸಿ, ನ್ಯಾಯವಾದಿ ವಿನೋದ ಎಸ್. ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *